ಹರಪನಹಳ್ಳಿ, ಮಾ.13 – ತಾಲ್ಲೂಕಿನ ಕೂಲಳ್ಳಿ ಗ್ರಾಮದಲ್ಲಿ ನಡೆಯುವ ಬಸವೇಶ್ವರ ರಥೋತ್ಸವದಲ್ಲಿ ಭಾಗವಹಿಸಲು ಕಕ್ಕರಗೊಳ್ಳದಿಂದ ಪಾದಯಾತ್ರೆ ಕೈ ಗೊಂಡಿರುವ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪುನೀತ್ ಫೋಟೋ ಹಿಡಿದು ಯಾತ್ರೆ ಆರಂಭಿಸಿದ್ದಾರೆ.
ಪಾದಯಾತ್ರೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘ ದಾವಣಗೆರೆಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಎಸ್. ಹಾಲೇಶಪ್ಪ ಉದ್ಘಾಟಿಸಿ ಯಾತ್ರಾರ್ಥಿಗಳಿಗೆ ಶುಭ ಕೋರಿದರು. ಈ ಸಂದರ್ಭದಲ್ಲಿ ನವೀನ್, ಆಂಜನೇಯ, ಮಾರುತಿ, ಹನುಮಂತ, ಪ್ರದೀಪ್ ಎಲೆದಳ್ಳಿ ಮತ್ತು ಇತರರು ಉಪಸ್ಥಿತರಿದ್ದರು.