ಮಲೇಬೆನ್ನೂರು, ಮಾ.13 – ಕಡಾರನಾಯಕನಹಳ್ಳಿ ಗ್ರಾಮದ ಶ್ರೀ ಯೋಗಿ ನಾರಾಯಣ ದೇವಸ್ಥಾನದ ಆವರಣದಲ್ಲಿ ತಮ್ಮ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಎಸ್.ರಾಮಪ್ಪ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಗ್ರಾ.ಪಂ. ಸದಸ್ಯರಾದ ಲೋಕೇಶ್, ಶ್ರೀಮತಿ ಕಾಮಾಕ್ಷಿ ಅಶೋಕ್, ಮುಖಂಡರಾದ ಗುಬ್ಬಿ ರಂಗನಾಥ್, ಎಸ್.ದಿವಾಕರಪ್ಪ, ಗುಂಡೇರಿ ಹನುಮಂತಪ್ಪ, (ಮರಳು), ಕೆ.ರಾಮಪ್ಪ, ಅನಂತರಾವ್, ದೇವಸ್ಥಾನದ ಅರ್ಚಕ ಗುರುರಾಜ್ ಈ ವೇಳೆ ಹಾಜರಿದ್ದರು.