ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವವರಿಗೆ ಉನ್ನತ ಸ್ಥಾನ

ಹರಿಹರದಲ್ಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಚಾಲನೆ

ಹರಿಹರ, ಜ.1- ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ, ಸೋಲು ಮತ್ತು ಗೆಲವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಹೊಂದಿದಾಗ ವಿಶ್ವಮಟ್ಟದ ಕ್ರೀಡಾಪಟುವಾಗಿ ಸಾಧನೆ ಮಾಡಲಿಕ್ಕೆ ಸಾಧ್ಯ ವಿದೆ ಎಂದು ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಎನ್.ಹೆಚ್. ಶ್ರೀನಿವಾಸ್ ಗೆಳೆಯರ ಬಳಗದ ವತಿಯಿಂದ ನಡೆದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎನ್.ಹೆಚ್. ಶ್ರೀನಿವಾಸ್ ಮಾತನಾಡಿ, ಈ ಪಂದ್ಯಾವ ಳಿಯಲ್ಲಿ ಭಾಗವಹಿಸಿರುವ ಆಟಗಾರರಲ್ಲಿ ಪ್ರಥಮ ಸ್ಥಾನ ವನ್ನು ಗಳಿಸಿದ ತಂಡಕ್ಕೆ 60 ಸಾವಿರ ನಗದು ಮತ್ತು ದ್ವಿತೀಯ ಸ್ಥಾನಕ್ಕೆ 30 ಸಾವಿರ ನಗದು ಮತ್ತು ಉತ್ತಮವಾದ ಪಾರಿ ತೋಷಕ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಈ ಪಂದ್ಯಾವಳಿಯ ಮತ್ತೊಂದು ವಿಶೇಷತೆಯೆಂದರೆ ನಗರದಲ್ಲಿರುವ ನೌಕರ ವರ್ಗಕ್ಕೆ ಕ್ರೀಡಾ ಮನೋಭಾವ ಹೆಚ್ಚಿಸುವ ದೃಷ್ಟಿಯಿಂದ `ಅಫಿಷಿಯಲ್ ಕಪ್’ ಸಹ ಆಯೋಜನೆ ಮಾಡಲಾಗಿದೆ. ಇದರಲ್ಲಿ ಪೊಲೀಸ್ ಇಲಾಖೆ, ವಿದ್ಯುಚ್ಛಕ್ತಿ ಇಲಾಖೆ, ನಗರದ ವಕೀಲರ ತಂಡಗಳು ಮತ್ತು ಸಾಮಾಜಿಕ ಕಾರ್ಯಕರ್ತರ ನಾಲ್ಕು ತಂಡಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಶ್ರೀ ಜಗದೀಶ್ವರ ಸ್ವಾಮೀಜಿ, ಮಾಜಿ ಶಾಸಕ ಬಿ.ಪಿ.ಹರೀಶ್, ಬಿಜೆಪಿ ಮುಖಂಡರಾದ ದೇವೇಂದ್ರಪ್ಪ ಕುಣೆಬೆಳಕೆರೆ, ನಗರಸಭಾ ಮಾಜಿ ಸದಸ್ಯ ನಾಗರಾಜ್ ಮೆಹರ್ವಾಡೆ, ನಗರಸಭೆ ಸದಸ್ಯರಾದ ಎನ್.ರಜನಿಕಾಂತ್, ಕೆ.ಜಿ.ಸಿದ್ದೇಶ್, ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ಲಕ್ಷ್ಮಪ್ಪ, ಕಾಗಿನೆಲೆಯ ವಿದ್ಯಾಪೀಠದ ಶಾಲೆ ಶಿಕ್ಷಕ ಬೀರೇಶ್, ರಾಘವೇಂದ್ರ ಉಪಾಧ್ಯಾಯ, ವಕೀಲ ಆನಂದ್ ಅತಾವುಲ್ಲಾ, ನಾಗರಾಜ್ ಹುಲಿಕಟ್ಟಿ, ಡಾನ್ ಬದ್ರಿ ಶ್ರೀನಿವಾಸ್, ಸುಚೇತ್ ಪೂಜಾರಿ, ಜಗದೀಶ್ ಸಿ.ಡಿ, ಶ್ರೀನಿಧಿ, ಮಂಜು  ಮತ್ತಿತರರು ಉಪಸ್ಥಿತರಿದ್ದರು.

error: Content is protected !!