ಮಲೇಬೆನ್ನೂರು, ಫೆ.21- ದೇವರಬೆಳಕೆರೆ ಗ್ರಾಮದ ಆರಾಧ್ಯ ದೈವ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿಯ ಮಹಾರಥೋತ್ಸವವು ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು. `ಚಾಂಗ್ಮಲೋ’ ಎಂಬ ಜಯ ಘೋಷದೊಂದಿಗೆ ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ವಿವಿಧ ಕಲಾಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ಸಂಜೆ ಮಂಗಳವಾರ ಕಾಲ ಶಾಸ್ತ್ರ, ತ್ರಿಶೂಲ ಮತ್ತು ಸರಪಳಿ ಪವಾಡಗಳು ನಡೆಯಲಿವೆ.
February 25, 2025