ಡಾ. ಶಿವಯೋಗಿಸ್ವಾಮಿ ಅವರನ್ನು ಆಶೀರ್ವದಿಸಿದ ರಂಭಾಪುರಿ ಶ್ರೀ

ದಾವಣಗೆರೆ, ಫೆ.21-  ರಸ್ತೆ ಅಪಘಾತದಲ್ಲಿ ಗಾಯಗೊಂಡು ವಿಶ್ರಾಂತಿಯ ಲ್ಲಿರುವ ವಿಧಾನ ಪರಿಷತ್ತಿನ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ ಅವರ ನಿವಾಸಕ್ಕೆ ಇಂದು ಸಂಜೆ ಭೇಟಿ ನೀಡಿದ್ದ ರಂಭಾಪುರಿ ಪೀಠದ ಜಗದ್ಗುರುಗಳು, ಶಿವಯೋಗಿ ಸ್ವಾಮಿ ಅವರ ಆರೋಗ್ಯವನ್ನು ವಿಚಾರಿಸಿ, ಶೀಘ್ರ ಗುಣಮುಖರಾಗಲೆಂದು ಆಶೀರ್ವದಿಸಿದರು. ಬಿಜೆಪಿ ಮುಖಂಡ ಕೆ.ಎಂ. ಸುರೇಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!