ಹರಪನಹಳ್ಳಿ, ಜ.28- ಸರ್ಕಾರಿ ಪದವಿ ಕಾಲೇಜಿನ ಪರೀಕ್ಷಾ ಶುಲ್ಕ ಹಾಗೂ ಅಂಕ ಪಟ್ಟಿ ಶುಲ್ಕ ಏರಿಕೆ ಖಂಡಿಸಿ ಎನ್.ಎಸ್.ಯು.ಐ ವತಿಯಿಂದ ಪ್ರತಿಭಟನೆ ನಡೆಸಿ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು
ಈ ವೇಳೆ ಎನ್.ಎಸ್.ಯು.ಐ ತಾಲ್ಲೂಕು ಅಧ್ಯಕ್ಷ ಎಂ.ಡಿ. ಶ್ರೀಕಾಂತ್ ಮಾತನಾಡಿ, ನೂತನ ವಿಜಯನಗರ ಜಿಲ್ಲೆಯಲ್ಲಿ ಇಲ್ಲದ ಶುಲ್ಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾಸ್ತಿ ಇದ್ದು ಕಾಲೇಜಿನ ಸಿಬ್ಬಂದಿಗಳು ಶುಲ್ಕ ಏರಿಕೆ ಬಗ್ಗೆ ಸರಿಯಾಗಿ ತಿಳಿಸದೆ ಹಿಂದುಳಿದ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ವಿಶ್ವವಿದ್ಯಾಲಯದ ಅಧಿಸೂಚನೆ ಪ್ರಕಾರ ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದವರಿಗೆ 150 ರೂ ಶುಲ್ಕ ವಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1050 ಶುಲ್ಕ ಕಟ್ಟಬೇಕು ಎಂದು ಹೇಳುತ್ತಿರುವುದು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿದಂತಾಗಿದೆ.
ಈ ಕೂಡಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಲ್ಕ ಕಡಿಮೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್.ಎಸ್.ಯು.ಐ ತಾಲ್ಲೂಕು ಉಪಾಧ್ಯಕ್ಷ ಡಂಕಿ ವಾಸಿಂ, ಕಾರ್ಯದರ್ಶಿ ಶಮೀರ್, ಮುಖಂಡರುಗಳಾದ ದುರ್ಗೇಶ್, ಗಾಂಧಿ, ವೀರೇಶ್, ಮಂಜುನಾಥ, ಸಾಕೀಬ್, ಮೋಹನ್ ನಾಯ್ಕ, ನಂದೀಶ, ಕೋಟೆಪ್ಪ, ಸೇರಿದಂತೆ ಇತರರು ಇದ್ದರು.