ಸನಾತನ ಧರ್ಮದ ಗೊಂದಲ ಸೃಷ್ಟಿಸುವ ಬದಲು ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಇರಲಿ-ರಾಮನಮಲಿ

ಸನಾತನ ಧರ್ಮದ ಗೊಂದಲ ಸೃಷ್ಟಿಸುವ ಬದಲು ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಇರಲಿ-ರಾಮನಮಲಿ

ಹರಪನಹಳ್ಳಿ, ಫೆ.16- ಸನಾತನ ಧರ್ಮದ ವಿಷಯವಾಗಿ ಗೊಂದಲ ಸೃಷ್ಟಿಸುವ ಬದಲು, ಅದರ ಬಗ್ಗೆ ಜನಸಾಮಾನ್ಯರಿಗೆ ವ್ಯಾಖ್ಯಾನಿಸುವ ಗುರುತರ ಜವಾಬ್ದಾರಿ ಸನಾತನದ ಪರ ನಿಂತವರ ಮೇಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಡಿ.ರಾಮನಮಲಿ  ಹೇಳಿದರು.

ಪಟ್ಟಣದ ಸಾಮರ್ಥ್ಯ ಸೌಧದಲ್ಲಿ  ಜನದನಿ ಸಾಹಿತ್ಯ ವೇದಿಕೆ ವತಿಯಿಂದ,  ಶಿವಸುಂದರ್‌ ರಚಿಸಿರುವ   `ಸಂವಿಧಾನ v/s ಸನಾತನವಾದ’ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಎಲ್ಲ ಜನರನ್ನೂ ಸಮಾನರು ಎಂದು ಮೊದಲು ಪರಿಗಣಿಸಿದ್ದು, ಈ ದೇಶದ ಸಂವಿಧಾನ. ದೇಶದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕೇ.  ವಿನಃ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಲ್ಕು ನೂರಕ್ಕೂ ಹೆಚ್ಚು ಸೀಟುಗಳು ಬಂದರೆ, ನಮ್ಮ ಆಡಳಿತವೇ ಬೇರೆ ಎನ್ನುವುದು ಸರಿಯಲ್ಲ ಎಂದರು.

ಪುಸ್ತಕ ಕುರಿತು ಕೊಪ್ಪದ ಸುಧೀರ್‌ಕುಮಾರ್ ಮರೋಳಿ ಮಾತನಾಡಿ, ಇಂದಿನ  ಯುವಕರಿಗೆ  ಸಂವಿಧಾನ ತಮ್ಮನ್ನು ಬಿಗ್ ಬಾಸ್ ಮಾಡುತ್ತದೆ ಎನ್ನುವ ನಂಬಿಕೆ ಇಲ್ಲ. ಇದು ಯಾರೊಬ್ಬರನ್ನೂ ಸಮರ್ಥನೆ ಮಾಡುವ ಪುಸ್ತಕ ಅಲ್ಲ. ಪುಸ್ತಕದಲ್ಲಿ ಮೌಲ್ಯಯುತ ಬರಹಗಳಿವೆ. ಸಂವಿಧಾನ ರಚನೆ ಮಾಡುವಾಗ ಅಂಬೇಡ್ಕರ್ ಅನುಭವಿಸಿದ ಕಷ್ಟ ನಷ್ಟಗಳ ಬಗ್ಗೆ ಇದೆ. ಏಕಲವ್ಯನ ಹೆಸರಿನಲ್ಲಿ ಕ್ರೀಡಾಪಟುಗಳಿಗೆ ಪ್ರಶಸ್ತಿ ಕೊಡುವುದು ಕೂಡಾ ಭಾರತ ಸಂವಿಧಾನದ ಶಕ್ತಿ. ಚಿಕ್ಕ ಪುಸ್ತಕದಲ್ಲಿ ಸಂವಿಧಾನದ ಬಗ್ಗೆ ವಿವರವಾಗಿ ಹೇಳಿದೆ. ಈ ದೇಶದಲ್ಲಿ ಬುಲ್ಡೋಜರ್ ನ್ಯಾಯದ ವ್ಯವಸ್ಥೆಯಲ್ಲಿದ್ದೇವೆ. ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳಿಗೆ ಉತ್ತಮ ಜ್ಞಾನ ನೀಡುವಲ್ಲಿ ಸರ್ಕಾರ ಎಡವುತ್ತಿದೆ. ಎಲ್ಲ ಪಕ್ಷಗಳಲ್ಲಿ ಒಳ್ಳೆಯವರು ಇದ್ದಾರೆ. ದೇಶದಲ್ಲಿ ಏಕರೂಪವಾಗಿರುವ ಶಿಕ್ಷಣ ಜಾರಿಯಾಗಬೇಕು.ರಾಜಕಾರ ಣಿಗಳು  `ಸಂವಿಧಾನ v/s ಸನಾತನವಾದ’ ಪುಸ್ತಕ ಓದಿ ಎಂದು ಹೇಳಿದರೆ ನೀವು ಉತ್ತಮ‌ ರಾಜಕಾರಣಿಯಾಗುತ್ತೀರಿ. ಸಂವಿಧಾನ ನಮ್ಮನ್ನು ಕೂಡಿ ಬಾಳಿಸುತ್ತಿದೆ ಎಂದರು. ಕುಂಭಮೇಳದಲ್ಲಿ ಯಾರ್ಯಾರು ಮಿಂದು ಎದ್ದರೂ ಎನ್ನುವ ಬದಲು ಸಂವಿಧಾನ ಓದುವ ಕೆಲಸ ಮಾಡಿ ಎಂದರು.

ಪುಸ್ತಕ ಬರೆದ ಬೆಂಗಳೂರಿನ ಸಾಹಿತಿ  ಶಿವಸುಂದರ್‌ ಮಾತನಾಡಿ, ರಾಜಕಾರಣಕ್ಕೆ ತಾಯಿ ಕರುಣೆ ಬೇಕು. ಸಂಘ ಪರಿವಾರ ಸಂವಿಧಾನವನ್ನು ತಬ್ಬಿಕೊಳ್ಳುವುದು ಧೃತರಾಷ್ಟ್ರನ ತಬ್ಬಿಕೊಳ್ಳುವಿಕೆ  ಎಂದು ಅರ್ಥವಾಗುತ್ತದೆ.  ಇಂದು ಮತ್ತೊಂದು ಸ್ವಾತಂತ್ರ್ಯ ಪಡೆದುಕೊಳ್ಳುವ ಅಗತ್ಯತೆ ಇದೆ ಎಂದರು. ಬಲಿಷ್ಟರು ದುರ್ಬಲರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಮನುಷ್ಯರನ್ನು ಸಮಾನವಾಗಿ ಕಾಣದ ಸನಾತನ ಮನಸುಗಳಿಗೆ ಇಂತಹ ಸಂಗತಿಗಳು ಸದಾ ಅಲರ್ಜಿ ಎನ್ನುವುದು ವಾಸ್ತವ. ಈ ಕಾರಣಕ್ಕಾಗಿ ಸಂವಿಧಾನ ಎಂದರೆ ಅವರಿಗಾಗದು. ಅಂಬೇಡ್ಕರ್ ಎಂದರೂ ಅವರಿಗಾಗದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಮಾತನಾಡಿ, ಪ್ರಮುಖವಾಗಿ ಇಂದಿನ ಯುವಕರಿಗೆ ಸಂವಿಧಾನದ ಬಗ್ಗೆ ತಿಳಿಹೇಳುವ ಅಗತ್ಯತೆ ಇದೆ. ಸುಧೀರ್‌ಕುಮಾರ್   ಸಂವಿಧಾನದ ಬಗ್ಗೆ ಉತ್ತಮವಾಗಿ ಹೇಳಿದ್ದಾರೆ. ರಾಜಕಾರಣಿಗಳಾದರೂ ನಾವು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಅನಿವಾರ್ಯತೆ ಇದೆ. ಯುವಕರಲ್ಲಿ ಸಂವಿಧಾನ ಮತ್ತು ನಾಯಕತ್ವ ರೂಪಿಸುವ ಶಿಬಿರಗಳು ನಡೆಯಬೇಕು ಎಂದರು.

ಮುಖಂಡ ಬಸವರಾಜ ಸಂಗಪ್ಪನವರ್ ಮಾತನಾಡಿ,  ದೇಶವನ್ನು ಅರ್ಥಮಾಡಿಕೊಂಡವರಿಗೆ ಸಂವಿಧಾನ ಅರ್ಥವಾಗುತ್ತದೆ. ಜನರಿಗೆ ವಾಸ್ತವ ಸತ್ಯ ತಿಳಿಸುವ ಕೆಲಸವನ್ನು ಮಾಡಿಕೊಂಡು ಬಂದಿರುವ ಲಡಾಯಿ ಪ್ರಕಾಶನ, ಈ ಕಿರುಹೊತ್ತಿಗೆಯನ್ನು ಹೊರತಂದಿದ್ದು ಇದನ್ನು ಓದಿ ಎಂದರು.

ಗದುಗಿನ ಬಸವರಾಜ ಸೂಳಿಬಾವಿ, ಹೊಸಪೇಟೆ ಸೋಮಶೇಖರ ಬಣ್ಣದಮನೆ,  ಸಾಹಿತಿ ಇಸ್ಮಾಯಿಲ್ ಎಲಿಗಾರ್, ಶಿಕ್ಷಕರಾದ ಸಿ.ಗಂಗಾಧರ, ಶೇಖರ್ ನಾಯ್ಕ, ಮಾಲತೇಶ ಮರೇಗೌಡ, ಗುಡಿಹಳ್ಳಿ ಹಾಲೇಶ, ವಿವಿಧ ಸಂಘಟನೆಗಳ  ಬಸಮ್ಮ, ಪುದ್ಮ, ನಿರ್ಮಲ, ಪದ್ಮಲತ, ಮೀನಾಕ್ಷಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!