ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ ಅತ್ಯಂತ ಸೂಕ್ತ-ಉಪನ್ಯಾಸಕ ನಯನಜಮೂರ್ತಿ

ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ ಅತ್ಯಂತ ಸೂಕ್ತ-ಉಪನ್ಯಾಸಕ  ನಯನಜಮೂರ್ತಿ

ದಾವಣಗೆರೆ, ಫೆ. 16- ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ದಾವಣಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಕೊಡ ಗನೂರು ದಾವಣಗೆರೆ ದಕ್ಷಿಣ ವಲಯ ಇವರ ಸಹಯೋಗ ದಲ್ಲಿ ಶಾಲಾ-  ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಶಾಲಾ ಆವರಣದಲ್ಲಿ ನಡೆಯಿತು.  ಕೆ.ಎಂ. ಗೀತಾ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ   ಪ್ರಾಸ್ತಾವಿಕ ನುಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಡೆದ ಬಂದ ದಾರಿಯನ್ನು ತಿಳಿಸಿದರು. 

ಕೊಡಗನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎಸ್. ಆರ್. ನಯನಜಮೂರ್ತಿ  ಮಾತನಾಡಿ,  `ವಿದ್ಯೆ ಬಾಳಿನ ಬೆಳಕು’ ಕುರಿತು ವಿದ್ಯಾರ್ಥಿಗಳಿಗೆ  ದತ್ತಿ ಉಪನ್ಯಾಸ ನೀಡುತ್ತಾ, ವಿದ್ಯೆ ಬಾಳಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿದೆ. ಪ್ರತಿಯೊಬ್ಬರೂ ವಿದ್ಯೆಯನ್ನು ಕಲಿತರೆ ಸಮಾಜ ಸುಧಾರಣೆ ಆಗುತ್ತದೆ. ಸಮತೋಲನ ಅಭಿವೃದ್ಧಿಗೆ ವಿದ್ಯೆ ಅಡಿಪಾಯವಾಗಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಶಿಕ್ಷಣ ಅತ್ಯಂತ ಸೂಕ್ತವಾಗಿಸಬೇಕಾಗಿದೆ. ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡದೇ ಅವರಿಗೆ ಸರಿಯಾದ ವೇಳೆಯಲ್ಲಿ ಸರಿಯಾದ ವಿದ್ಯೆಯನ್ನು ನೀಡಿದರೆ ಸಮಾಜಕ್ಕೆ ಒಳಿತಾಗುತ್ತದೆ ಎಂದರು.

ತಾಲ್ಲೂಕು ಕಸಾಪ  ನಿರ್ದೇಶಕರಾದ ಪರಿಮಳ ಜಗದೀಶ್ ದತ್ತಿ ದಾನಿಗಳನ್ನು  ಸ್ಮರಿಸಿದರು.  ನಿರ್ದೇಶಕ  ಷಡಕ್ಷರಪ್ಪ ಎಂ.ಬೇತೂರು, ಜಿಲ್ಲಾ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್. ಶಿವಶಂಕರ್ ಕನ್ನಡ ನಾಡು – ನುಡಿ, ಸಂಸ್ಕೃತಿ, ಕಲೆ, ಕನ್ನಡ ಭಾಷೆ ಕುರಿತು ಮಾತನಾಡಿದರು.

error: Content is protected !!