ಜಿಗಳಿಯಲ್ಲಿ ಸಂಭ್ರಮದ ಮೆರವಣಿಗೆ, ಗುಗ್ಗಳ

ಜಿಗಳಿಯಲ್ಲಿ ಸಂಭ್ರಮದ ಮೆರವಣಿಗೆ, ಗುಗ್ಗಳ

ಮಲೇಬೆನ್ನೂರು, ಡಿ. 27- ಜಿಗಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ  ಅಂತರಹಳ್ಳಿಯ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಅಂಗವಾಗಿ ಗುರುವಾರ ಸಂಜೆ ಗ್ರಾಮದಲ್ಲಿ ಕುಂದಾಪುರದ ಶ್ರೀ ಶನೇಶ್ವರ ಚಂಡೆ ಕಲಾ ತಂಡದೊಂದಿಗೆ ಮೆರವಣಿಗೆ ಮಾಡಲಾಯಿತು.

ಗ್ರಾಮದ ಶ್ರೀಮತಿ ಮೈತ್ರಾದೇವಿ, ನಂದಿಗುಡಿ ರುದ್ರಗೌಡ ಮತ್ತು ಕುಟುಂಬದ ವರಿಂದ ಶುಕ್ರವಾರ ಬೆಳಿಗ್ಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನಡೆಯಿತು. ವೀರಭದ್ರೇಶ್ವರ ಸ್ವಾಮಿಯ ಮೆರವಣಿಗೆಗೆ ಚಂಡೆ ಕಲಾವಿದರು ತಮ್ಮ ಕಲೆಯ ಮೂಲಕ ಮೆರಗು ತಂದರು.

error: Content is protected !!