ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ಸನ್ಮಾನ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ  ಡಾ. ಎ.ಬಿ. ರಾಮಚಂದ್ರಪ್ಪ ಅವರಿಗೆ ಸನ್ಮಾನ

ಹರಿಹರ, ಡಿ.25-  ಸಾಹಿತ್ಯ, ಸಂಸ್ಕೃತಿ, ಸಮಾಜಮುಖಿ ಹೋರಾಟದ ಹಿನ್ನೆಲೆ  ಹೊಂದಿರುವ ಡಾ. ಎ.ಬಿ. ರಾಮಚಂದ್ರಪ್ಪ ಅವರು  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗುವಂತಹ ಅವಕಾಶ   ಸಂದಿರುವುದು ಸಂತಸದ ವಿಚಾರ  ಎಂದು ನಿವೃತ್ತ ಪ್ರಾಧ್ಯಾಪಕ ಹೆಚ್. ಎ. ಭಿಕ್ಷಾವರ್ತಿಮಠ  ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ  ಮ್ಯಾಂಗೊ ಗಾರ್ಡನ್ ಸಭಾಂಗಣದಲ್ಲಿ 14ನೇ ಜಿಲ್ಲಾ  ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎ.ಬಿ. ರಾಮಚಂದ್ರಪ್ಪನವರಿಗೆ  ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. 

ಹಿರಿಯ ಸಾಹಿತಿ ಜೆ.ಕಲಿಂ ಬಾಷಾ ಮಾತನಾಡಿ, ರಾಮಚಂದ್ರಪ್ಪ ಬಹುಮುಖ ಪ್ರತಿಭೆವುಳ್ಳ ವ್ಯಕ್ತಿಯಾಗಿದ್ದು, ಸುಮಾರು ಮೂರು ನಾಲ್ಕು ದಶಕಗಳಿಂದ ಹರಿಹರ ತಾಲ್ಲೂಕಿನ ಜನತೆಯಲ್ಲಿ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿ ಆಗಿರುವುದರಿಂದ ಸಮ್ಮೇಳನದಲ್ಲಿ ಹರಿಹರ ನಗರದ ಸಮಸ್ಯೆಗಳ ಬಗ್ಗೆ ತಮ್ಮ ಛಾಪನ್ನು ಮೂಡಿಸುವ ಕೆಲಸವನ್ನು ಮಾಡಲಿ ಎಂದು ಹೇಳಿದರು.

ಡಿ.ಸಿ.ಸಿ‌ ಬ್ಯಾಂಕ್ ಉಪಾಧ್ಯಕ್ಷ ಡಿ. ಕುಮಾರ್, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ,  ಸಿ.ಎನ್. ಹುಲಗೇಶ್,  ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್ ಮಾತನಾಡಿ, ತಳ ಸಮುದಾಯದಿಂದ ಬಂದಿರುವ ಎ.ಬಿ. ರಾಮಚಂದ್ರಪ್ಪ ಅವರನ್ನು ಗುರುತಿಸಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ತಳ ಸಮುದಾಯದ ಜನರಿಗೆ ಸಂತಸವನ್ನು ತರಿಸಿದೆ ಎಂದು ಹೇಳಿದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎ.ಬಿ. ರಾಮಚಂದ್ರಪ್ಪ,   ನಾಲ್ಕು ದಶಕಗಳಿಂದ ಇಲ್ಲಿನ ಜನತೆಯ ಒಡನಾಟವನ್ನು ಹೊಂದಿರುವ ನಾನು ವಿದ್ಯಾರ್ಥಿ ಜೀವನದಲ್ಲಿ ಹೋರಾಟ ನಡೆಸಿದ ಕಾಲೇಜಿನಲ್ಲಿಯೇ ಪ್ರಾಧ್ಯಾಪಕನಾಗಿ ಸೇವೆ ಮಾಡುವಂತಹ  ಸೌಭಾಗ್ಯ ಸಿಕ್ಕಿದ್ದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಹೇಳಿದರು.   

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಿಖಿಲ್ ಕೊಂಡಜ್ಜಿ, ಜಿಲ್ಲಾ ಕಸಾಪ  ಗೌರವ ಕಾರ್ಯದರ್ಶಿಗಳಾದ ರೇವಣಸಿದ್ದಪ್ಪ,  ಎಂ. ಚಿದಾನಂದ ಕಂಚಿಕೇರಿ,  ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್,  ರಾಜ್ಯ ಪರಿಷತ್ ಸದಸ್ಯ ಎಂ. ಉಮ್ಮಣ್ಣ, ಕುಮಾರನಹಳ್ಖಿ ಮಂಜುನಾಥ್ ಪಟೀಲ್, ಜಿಗಳಿ ಆನಂದಪ್ಪ, ವೀರಯ್ಯ,  ತಾಲ್ಲೂಕು ಸಂಘಟನಾ ಕಾರ್ಯದರ್ಶಿ ನಾಗರಾಜ್, ಬಿರ್ಲಾ, ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ. ಕೊಟ್ರೇಶ್, ನಗರಸಭೆ  ಸದಸ್ಯ ಕೆ.ಬಿ. ರಾಜಶೇಖರ್, ಸಿರಿಗೆರೆ ಕುಂದೂರು ಮಂಜಪ್ಪ, ನರೇಂದ್ರ ಬಿಳಸನೂರು, ವಾಸುದೇವ ಕುಂಬಳೂರು, ಕಡೆಮನೆ ನಾಗೇಂದ್ರಪ್ಪ ಸಿರಿಗೆರೆ, ದಾವಣಗೆರೆ ನಿವೃತ್ತ ಇಂಜಿನಿಯರ್ ಮಹಾಂತಪ್ಪ, ಜಯಪ್ಪ, ನಿವೃತ್ತ ಶಿಕ್ಷಕ ಜಿ.ಆರ್.‌ನಾಗರಾಜ್, ನಿವೃತ್ತ ಯೋಧ ಪರಶುರಾಮ್, ದೊಗ್ಗಳ್ಳಿ ಚಂದ್ರಪ್ಪ, ಜಿಗಳಿ ಮಂಜುನಾಥ್ ಇತರರು ಹಾಜರಿದ್ದರು.  

ಕಸಾಪ ತಾಲ್ಲೂಕು ಅಧ್ಯಕ್ಷ ಡಿ.ಎಂ. ಮಂಜು ನಾಥಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮೇಶ್ವರಪ್ಪ ಕತ್ತಿಗೆ ಪಾರ್ಥಿಸಿದರು. ಜಿಗಳಿ ಪ್ರಕಾಶ್ ಸ್ವಾಗತಿಸಿದರು. ವಿ.ಬಿ. ಕೊಟ್ರೇಶ್ ನಿರೂ ಪಿಸಿದರೆ   ರೇವಣಸಿದ್ದಪ್ಪ ಅಂಗಡಿ  ವಂದಿಸಿದರು.

error: Content is protected !!