ಹರಿಹರ, ಡಿ.25- ನಗರದಲ್ಲಿ ಬರುವ ಮಾರ್ಚ್ ತಿಂಗಳಲ್ಲಿ ಜರುಗುವ ಗ್ರಾಮದೇವತೆ ಊರಮ್ಮ ದೇವಿ ಜಾತ್ರೆಯ ಕಸಬಾ ಭಾಗದ ಡಬ್ಬಿ ಗಡಿಗೆ ದೇಣಿಗೆ ಕಾಣಿಕೆಯನ್ನು ಇಂದು ಎಣಿಕೆ ಮಾಡಲಾಯಿತು 21,88,380 ರೂಪಾಯ ಹಣ ಸಂಗ್ರಹವಾಗಿದೆ ಎಂದು ಕಸಬಾ ಗೌಡ್ರು ಲಿಂಗರಾಜ್ ಪಾಟೇಲ್ ಮತ್ತು ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ ತಿಳಿಸಿದರು.
ಮಾಜೇನಹಳ್ಳಿ ಭಾಗದಲ್ಲಿ ನಾಡಿದ್ದು ದಿನಾಂಕ 27ರ ಶುಕ್ರವಾರದಿಂದ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಹಾರ್ನಳ್ಳಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಿರೀಶ್ ಗೌಡ್ರು, ಖಜಾಂಚಿ ಕೆಂಚಪ್ಪ, ಸಹ ಕಾರ್ಯದರ್ಶಿ ಸಿದ್ದಪ್ಪ ಬಣಕಾರ, ಆಂಜನೇಯಸ್ವಾಮಿ ಸಿದ್ದಪ್ಪ, ಆಂಜನೇಯ, ಶಾನಬೋಗರು ಗಿರೀಶ್ , ಮುಖಂಡರಾದ ಕೆ. ಜಡಿಯಪ್ಪ, ಕೆ. ಬಿ ರಾಜಶೇಖರ್, ಬಸವರಾಜ್ ಪಾಟೀಲ್, ಜಿ ನಂಜಪ್ಪ, ಶೇರಾಪುರ ರಾಜಣ್ಣ, ಬೆಣ್ಣೆ ಸಿದ್ದೇಶ್ ಪರಮೇಶ್ವರಪ್ಪ ನೀಲಗುಂದ, ಎಂ. ಚಿದಾನಂದ ಕಂಚಿಕೇರಿ, ಶೇಖರಗೌಡ ಪಾಟೀಲ್, ಮಂಜುನಾಥ್, ಪಾಲಾಕ್ಷಪ್ಪ, ಶಶಿಧರ್ ಆನ್ವೇರಿ, ಸಂಗನಾಳ ಮಠ, ಮನೋಹರ, ಹನುಮಂತಪ್ಪ ಸುರ್ವೆ, ಐರಣಿ ಬೀರಪ್ಪ, ತಿಮ್ಮೇಶ, ನಲ್ಲಿ ಬಸವರಾಜ್ ಅರ್ಚಕರಾದ ಈರಣ್ಣ, ನಾಗರಾಜ್, ಈರಪ್ಪಜ್ಜ, ಪ್ರವೀಣ್ ಇತರರು ಹಾಜರಿದ್ದರು.