ದಾವಣಗೆರೆ, ಡಿ.25- ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಜಯ ದಾಖಲಿಸಿದ ಜೆಜೆಎಂ ವೈದ್ಯಕೀಯ ಕಾಲೇಜಿನ ಔಷಧಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಶ್ರೀನಿವಾಸ್ ಎಲ್.ಡಿ. ಅವರಿಗೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಶುಭ ಕೋರಿದರು.
ಇದೇ ದಿನಾಂಕ 10 ರಂದು ಜೆಜೆಎಂ ವೈದ್ಯಕೀಯ ಕಾಲೇಜು ಆವರಣದಲ್ಲಿ ಸೆನೆಟ್ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿತ್ತು. ಈ ಚುನಾವಣೆಯಲ್ಲಿ ಚಲಾವಣೆಗೊಂಡು ಸ್ವೀಕೃತವಾದ 6,217 ಮತಗಳಲ್ಲಿ ಡಾ. ಶ್ರೀನಿವಾಸ್ 875 ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ. ಈ ಪೈಕಿ ಪ್ರಥಮ ಪ್ರಾಶಸ್ತ್ಯದ 670 ಮತಗಳನ್ನ ಪಡೆಯುವ ಮೂಲಕ ಎಣಿಕೆಯ ಮೊದಲ ಸುತ್ತಿನಲ್ಲಿಯೇ, ವಿಜಯದೆಡೆಗೆ ದಾಪುಗಾಲಿಟ್ಟಿದ್ದರು.
ಶ್ರೀನಿವಾಸ್ ಅವರನ್ನು ಬಾಪೂಜಿ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಸಂಪಣ್ಣ ಮುತಾಲಿಕ್, ಎಸ್.ಎಸ್. ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ ಬಿ.ಎಸ್ ಪ್ರಸಾದ್, ಎಸ್ಎಸ್ಐಎಮ್ಎಸ್ ವ್ಯವಸ್ಥಾಪಕ ರವಿ ಆರ್ ಜಿ, ಡಾ.ಸತೀಶ್, ಡಾ.ಹರೀಶ್, ಸುಶೃತ ಆಸ್ಪತ್ರೆಯ ಡಾ.ಸತೀಶ್ ಬಿ.ಜಿ., ಡಾ. ಹರೀಶ್ ಬಿ.ಜಿ., ಡಾ. ಶಿವಶಂಕರ್, ಡಾ.ಚಂದ್ರಪ್ಪ, ದವನ್ ಕಾಲೇಜಿನ ವೀರೇಶ್ ಪಟೇಲ್ ಅಭಿನಂದಿಸಿದ್ದಾರೆ.