ದಾವಣಗೆರೆ, ಡಿ. 23- ಸಂಸತ್ತಿನಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರ ವಿರುದ್ಧ ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ಮಾನವ ಸರಪಳಿ ನಿರ್ಮಿಸಿ ಜಯದೇವ ವೃತ್ತ, ಗಾಂಧಿ ಸರ್ಕಲ್ , ನಗರ ಸಭೆ ಮೂಲಕ ಮತ್ತೆ ಅಂಬೇಡ್ಕರ್ ವೃತ್ತಕ್ಕೆ ಬಂದು ಸಭೆ ನಡೆಸಲಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ದೇಶದ ಕ್ಷಮೆ ಕೋರಬೇಕು ಎಂದು ಒತ್ತಾಯಿಸಲಾಯಿತು.
ವೇದಿಕೆಯ ಸಂಚಾಲಕ ಅನಿಸ್ ಪಾಷ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಗ್ಗೆರೆ ರಂಗಪ್ಪ ಕ್ರಾಂತಿ ಗೀತೆಗಳನ್ನು ಹಾಡಿದರು, ವೇದಿಕೆ ಸಂಚಾಲಕರುಗಳಾದ ವಕೀಲರಾದ ಬಿಎಮ್ ಹನುಮಂತಪ್ಪ, ರವಿ ನಾರಾಯಣ, ರುದ್ರಮನಿ ನಿವೃತ್ತ ಪೊಲೀಸ್ ಅಧಿಕಾರಿಗಳು, ಎ.ಬಿ. ರಾಮಚಂದ್ರಪ್ಪ, ಬಿ ವೀರಣ್ಣ, ಮುಸ್ಲಿಂ ಸಮಾಜದ ಅಧ್ಯಕ್ಷರಾದ ದಾದು ಸೆಟ್ ಇಮ್ರಾನ್ , ಸಾಬಿರಲಿ, ಗುಮ್ಮನೂರು ಮಲ್ಲಿಕಾರ್ಜುನ್, ಆನಂದ್ ಗುರೂಜಿ , ಭೈರೇಷ್, ಅಬ್ದುಲ್ಲ ನಜೀರ್, ನೆರಳು ಬಿಡಿ ಕಾರ್ಮಿಕರ ಸಂಘದ ಜಬೀನ ಖಾನಂ ಮಾತನಾಡಿ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಜನಶಕ್ತಿಯ ಸತೀಶ ಅರವಿಂದ, ಕರಿಬಸಪ್ಪ, ಗನಿ ತಾಹಿರ್, ಸ್ಲಂ ಜನಂದೋಲನ ಸಂಘಟನೆಯ ರೇಣುಕಾ ಎಲ್ಲಮ್ಮ ವಿಜಯಮ್ಮ ಶಬ್ಬೀರ್ ಸಾಬ್ , ಭಾಗ್ಯ, ಈಶ್ವರಪ್ಪ, ಹನುಮಂತಪ್ಪ ಮೈಲಾರಪ್ಪ, ಬಸವರಾಜ್, ಶೇಖರಪ್ಪ, ಪರಮೇಶ್ವರಪ್ಪ, ಭಾಷಾ ಸಾಬ್, ಆಯೂಬ್ ಸಾಬ್, ಹಲಸಂಗಿ, ಜಗನ್ನಾಥ್ ಇನ್ನಿತರರು ಹಾಜರಿದ್ದರು.