ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ

ರಾಣೇಬೆನ್ನೂರು,ಡಿ.23  – ತುಂಗಭದ್ರಾ ನದಿಯಿಂದ ಪೈಪ್‍ಲೈನ್ ಮುಖಾಂತರ ಕೆರೆಗಳಿಗೆ  ನೀರು ತುಂಬಿಸುವ ಯೋಜನೆ ಭಾರೀ ಭ್ರಷ್ಟಾಚಾರದಿಂದ ಕೂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್. ಪಾಟೀಲ  ಆರೋಪಿಸಿದ್ದಾರೆ. 

ಬಿಜೆಪಿ ಸರ್ಕಾರದ  ಅವಧಿಯ ಭ್ರಷ್ಟ ಯೋಜನೆಯಲ್ಲಿ ಇದೂ ಕೂಡಾ ಒಂದಾಗಿದೆ.  ಹೊಳೆ ಆನ್ವೇರಿ ಹತ್ತಿರದ ತುಂಗಭದ್ರಾ ನದಿಯಿಂದ ಪೈಪ್‍ಲೈನ್ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಯ ಕಾಮಗಾರಿ ಈಗ ನಡೆಯುತ್ತಿದ್ದು, ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಕ್ರೇನ್ ಮೂಲಕ ಜೆಸಿಬಿ  ಬಳಸಿ ಪೈಪ್‍ಲೈನ್ ಹಾಕುತ್ತಿರುವುದರಿಂದ ಪಕ್ಕದ ರೈತರ ಫಲವತ್ತಾದ ಕೃಷಿ ಜಮೀನಿಗೆ ಭಾರೀ ನಷ್ಟವಾಗುತ್ತಿದೆ.  ಈ ಹಿಂದೆ ಸರ್ಕಾರ ಅಂತರ್ಜಲ ಹೆಚ್ಚಳಕ್ಕೆಂದೇ ಮಾಡಿದ್ದ ಸುಜಲಾ ಜಲಾಯನ ಯೋಜನೆಯಲ್ಲಾದ ಕಾಮಗಾರಿಗಳು ಸಹ ನಾಶವಾಗುತ್ತಿವೆ.  ಈ ಕೂಡಲೇ ಭ್ರಷ್ಟಾಚಾರದ ಈ ಯೋಜನೆ ನಿಲ್ಲಿಸಬೇಕು. 

ಈ ಯೋಜನೆಯ ಬಗ್ಗೆ ಈಗಾಗಲೇ ಲೋಕಾಯುಕ್ತ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಳ್ಳುವ ತನಕ ಕಾಮಗಾರಿ ಸ್ಥಗಿತಗೊಳಿಸಿ, ಈ ಕಾಮಗಾರಿಯಿಂದ ಅಚ್ಚುಕಟ್ಟಾಗಿದ್ದ ಮಾಗೋಡ, ಇಟಗಿ, ಮುಷ್ಟೂರು, ಹೊಳೆಆನ್ವೇರಿ ರಸ್ತೆ ಹಾಳಾಗುತ್ತಿರುವುದನ್ನು ತಡೆಹಿಡಿ ಯುವಂತೆಯೂ ಅವರು ಒತ್ತಾಯಿಸಿದ್ದಾರೆ.

error: Content is protected !!