ಚದುರಂಗ ಮಕ್ಕಳ ಬುದ್ಧಿ ಶಕ್ತಿ ಬೆಳವಣಿಗೆಗೆ ಸಹಕಾರಿ

ಚದುರಂಗ ಮಕ್ಕಳ ಬುದ್ಧಿ ಶಕ್ತಿ ಬೆಳವಣಿಗೆಗೆ ಸಹಕಾರಿ

ಚೆಸ್ ಪಂದ್ಯಾವಳಿಯ ಉದ್ಘಾಟನೆಯಲ್ಲಿ ದಿನೇಶ್ ಕೆ.ಶೆಟ್ಟಿ

ದಾವಣಗೆರೆ, ನ. 10-  ನಗರದ ಗುರುಭವನದಲ್ಲಿ ದಾವಣಗೆರೆ ಚೆಸ್ ಕ್ಲಬ್ ಹಾಗೂ ಸರ್ಕಲ್ ಚೆಸ್ ಅವರ ಸಹಯೋಗದೊಂದಿಗೆ ಓಪನ್ ರಾಪಿಡ್ ಚೆಸ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. 

ಪಂದ್ಯಾವಳಿಯನ್ನು ಉದ್ಘಾಟಿಸಿದ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷರೂ, ದಾವಣಗೆರೆ ಚೆಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಮಾತನಾಡಿ, ಮಕ್ಕಳ ನೆನಪಿನ ಶಕ್ತಿ ಬೆಳವಣಿಗೆಗೆ ಚದುರಂಗವು ಉತ್ತಮ ರೀತಿಯಲ್ಲಿ ಸಹಕಾರಿಯಾಗುತ್ತದೆ. 

ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳಲು ತಾಳ್ಮೆ ಅವಶ್ಯ ವಾಗಿರುತ್ತದೆ. ಇಂತಹ ಆಟದಿಂದ ತಾಳ್ಮೆ ವೃದ್ಧಿಯಾಗಿ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ ಎಂದು ಹೇಳಿದರು. 

ಮಹಾನಗರ ಪಾಲಿಕೆ ಸದಸ್ಯ ಎ. ನಾಗರಾಜ್ ಮಾತನಾಡಿ, ಚದುರಂಗವು ಎಲ್ಲಾ ಕ್ರೀಡೆಗಳಿಗಿಂತ ಭಿನ್ನವಾಗಿದೆ. ಇದರಲ್ಲಿ ತಾಳ್ಮೆ ಇದ್ದವರು ಉತ್ತಮ ಪ್ರದರ್ಶನ ನೀಡಿ ಜಯಶಾಲಿಯಾಗುತ್ತಾರೆ. ಸಣ್ಣ ಮಕ್ಕಳಿಂದ ಈ ಆಟವನ್ನು ರೂಢಿಸಿಕೊಂಡರೆ ಅವರ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ಯುವರಾಜ್, ಮಂಜುಳಾ, ಯುವರಾಜ್, ಸುರೇಶ್, ತೀರ್ಪುಗಾರರಾದ ಆದಿತ್ಯ, ಕೃಷ್ಣಮೂರ್ತಿ ಮುಂತಾದವರಿದ್ದರು.

error: Content is protected !!