ಹರಿಹರ, ಜ. 20 – ತಾಲ್ಲೂಕಿನ ಅಭಿವೃದ್ಧಿ ಮತ್ತು ಶಾಂತಿಗಾಗಿ ಚಿಂತಿಸೋಣ, ಒಗ್ಗಟ್ಟು ಪ್ರದರ್ಶಿಸೋಣ ಎಂಬ ಧ್ಯೇಯದೊಂದಿಗೆ ಜೆಡಿ ಎಸ್ ಪಕ್ಷದ ವತಿಯಿಂದ ನಾಡಿದ್ದು ದಿನಾಂಕ 22ರ ಭಾನುವಾರ ಸಂಜೆ 4 ಗಂಟೆಗೆ ದಾವಣಗೆರೆಗೆ ಹೋಗುವ ರಸ್ತೆಯ ಚಾನಲ್ ಪಕ್ಕದ ಆವರಣದಲ್ಲಿ ಅಲ್ಪಸಂಖ್ಯಾತರ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹಬೀಬ್ ಉಲ್ಲಾ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಮ್ಮ ಸಮುದಾಯಕ್ಕೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಬೆನ್ನೆಲುಬಾಗಿ ನಿಂತು ಸಲಹೆ, ಸಹಕಾರ ಮಾಡುತ್ತಾ ಬಂದಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಹೆಚ್.ಎಸ್. ಶಿವಶಂಕರ್ ಅವರನ್ನು ಗೆಲ್ಲಿಸಿದರೆ ಸೂಕ್ತವಾಗಿದೆ ಎಂದವರು ಹೇಳಿದರು.
ಸಮಾವೇಶದಲ್ಲಿ ಪ್ರಮುಖವಾಗಿ ತಾಲ್ಲೂಕಿನ ಅಭಿವೃದ್ಧಿ ಮತ್ತು ಶಾಂತಿಗಾಗಿ ಚಿಂತಿಸೋಣ, ಸಮಾಜದಿಂದ ಒಗ್ಗಟ್ಟು ಪ್ರದರ್ಶಿಸೋಣ ಎಂಬ ಪ್ರಮುಖ ಅಂಶಗಳನ್ನು ಹೊಂದಲಾಗಿದೆ ಎಂದು ಅವರು ಹೇಳಿದರು.
ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮತ್ತು ಕೆ.ಕೆ. ಮನ್ಸೂರು ಮಾತನಾಡಿ, ಶಾಸಕ ರಾಮಪ್ಪ ಅವರ ಅವಧಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ನಾಡ್ ಬಂದ್ ಷಾವಲಿ ದರ್ಗಾ ಮುಂದಿನ ರಸ್ತೆಯನ್ನು ಐದು ವರ್ಷ ಕಳೆದರೂ ದುರಸ್ತಿ ಮಾಡಲು ಆಗಲಿಲ್ಲ ಎಂದರು.
ನಗರಸಭೆ ಮಾಜಿ ಸದಸ್ಯ ಹಾಜಿ ಹಾಲಿ ಮಾತನಾಡಿ, ಈ ಸಮಾವೇಶದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಜೆಡಿಸ್ ಜಿಲ್ಲಾ ಅಧ್ಯಕ್ಷ ಬಿ. ಚಿದಾನಂದಪ್ಪ, ಮುಖಂಡ ರಾದ ಅಮಾನುಲ್ಲಾ ಖಾನ್, ಅಜಗರ್, ಮನ್ಸೂರು ಆಲಿ ಇತರರು ಆಗಮಿಸುತ್ತಾರೆ ಎಂದು ಹೇಳಿದರು. ನಗರ ಘಟಕದ ಅಧ್ಯಕ್ಷ ಹಬೀಬ್ ಉಲ್ಲಾ ಹಾಗೂ ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮಾತನಾಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಬಿ. ಅಲ್ತಾಫ್, ಮಾಜಿ ನಗರಸಭೆ ಸದಸ್ಯ ಹಾಜಿಹಾಲಿ ಖಾನ್, ಜೆಡಿಸ್ ಅಲ್ಪಸಂಖ್ಯಾತ ಮುಖಂಡರಾದ ಮನ್ಸೂರು ಮದ್ದಿ, ಜಾಕೀರ್, ಆಸ್ತ್ರಾ ಖಾನ್, ಅಶ್ರಫಿ, ಮಹಮ್ಮದ್ ಷರೀಫ್, ಖಾಲಿದರ್, ಎಂ.ಎನ್. ಫಾರುಖ್, ಇನಾಯತ್, ಕರೀಂ, ಅಬ್ಬಾಸ್ ಇತರರು ಹಾಜರಿದ್ದರು.