ಹರಿಹರ, ಅ. 24 – ಮಂಡ್ಯ ನಗರದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಾಡಿನ ಜನರಿಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಯಾತ್ರೆ ನಗರಕ್ಕೆ ಗುರುವಾರ ಸಂಜೆ ಆಗಮಿಸಿತು.
ತಹಶೀಲ್ದಾರ್ ಗುರುಬಸವರಾಜ್ ಅವರು ತಾಯಿ ಭುವನೇಶ್ವರಿ ಮೂರ್ತಿಗೆ ಎಸ್.ಜೆ.ವಿ.ಪಿ. ಕಾಲೇಜು ಮುಂಭಾಗದಲ್ಲಿ ಹೂವಿನ ಹಾರವನ್ನು ಹಾಕುವುದರೊಂದಿಗೆ ವಿಶೇಷ ಪೂಜೆಯನ್ನು ಸಮರ್ಪಿಸಿ, ತೆಂಗಿನ ಕಾಯಿ ಒಡೆಯುವ ಮೂಲಕ ಜ್ಯೋತಿ ರಥದ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡೊಳ್ಳು, ಶಾಲಾ ವಿದ್ಯಾರ್ಥಿಗಳ ಡ್ರಮ್ ಸೆಟ್, ವಾದಕಗಳು ಸೇರಿದಂತೆ ಇತರೆ ಕಲಾ ಮೇಳಗಳು ಮೆರವಣಿಗೆಗೆ ಮೆರಗನ್ನು ನೀಡಿದವು.
ಮೆರವಣಿಗೆ ಎಸ್.ಜೆ.ವಿ.ಪಿ. ಕಾಲೇಜು ಮುಂಭಾಗದಿಂದ ಆರಂಭಗೊಂಡು ಗಾಂಧಿ ವೃತ್ತದಲ್ಲಿ ಅಂತ್ಯಗೊಂಡಿತು. ಮೆರವಣಿಗೆ ಸಾಗುವ ವೇಳೆ ನಗರಸಭೆ, ತಾ.ಪಂ., ಶಿಕ್ಷಣ, ಸಿಡಿಪಿಓ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜ್ಯೋತಿ ರಥಕ್ಕೆ ಪುಷ್ಪಾರ್ಚನೆ ಮಾಡಿದರು.
ಈ ಸಂದರ್ಭದಲ್ಲಿ ತಾ.ಪಂ. ಇಓ ಸುಮಲತ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಬಿಇಓ ಡಿ. ದುರ್ಗಪ್ಪ, ಸಿಡಿಪಿಓ ಪೂರ್ಣಿಮಾ, ಕಾರ್ಮಿಕ ಇಲಾಖೆ ಕವಿತಾ, ಬೆಸ್ಕಾಂ ಇಲಾಖೆ ಮಾರ್ಕಂಡೇಯ, ಎಎಸ್ಐ ಶ್ರೀಪತಿ ಗಿನ್ನಿ, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ, ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ಹಿರಿಯ ಸಾಹಿತಿಗಳಾದ ಪ್ರೊ ಎಸ್.ಎ. ಭಿಕ್ಷಾವರ್ತಿ ಮಠ, ಜೆ.ಕಲಿಂ ಬಾಷಾ, ಹೆಚ್.ಕೆ. ಕೊಟ್ರಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿ ಬಿ.ಬಿ. ರೇವಣ್ಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ನಾಮ ನಿರ್ದೇಶನ ಸದಸ್ಯ ಕೆ.ಬಿ. ರಾಜಶೇಖರ್, ಶೇಖರಗೌಡ ಪಾಟೀಲ್, ಹೆಚ್.ಸಿ. ಕೀರ್ತಿಕುಮಾರ್, ಕರಿಬಸಪ್ಪ ಕಂಚಿಕೇರಿ, ಸುರೇಶ್ ಕುಣೆಬೆಳಕೇರಿ, ವಿಶ್ವನಾಥ, ಆರ್. ಮಂಜುನಾಥ್, ಕೃಷ್ಣ ರಾಜೊಳ್ಳಿ, ಈಶಪ್ಪ ಬೂದಿಹಾಳ್, ಶಿವಮೂರ್ತಿ, ಪ್ರವೀಣ್ ಗೌಡ, ಎಂ.ಎಸ್. ಆನಂದ್, ಗುರುಬಸವರಾಜ್, ಸಂತೋಷ ಗುಡಿಮನಿ, ಯಮನೂರು ಕನ್ನಡಪರ ಸಂಘಟನೆ ಮುಖಂಡ ಹೆಚ್. ಸುಧಾಕರ್, ರಮೇಶ್ ಮಾನೆ, ಪ್ರೀತಂ ಬಾಬು, ಇಲಿಯಾಸ್ ಆಹ್ಮದ್, ವಿ.ಎ. ಹೇಮಂತ್ ಕುಮಾರ್, ಸಮೀರ್, ಸೀತಾ ನಾರಾಯಣ, ಗೀತಾ ಕೊಂಡಜ್ಜಿ, ರಾಗಿಣಿ ಇತರರು ಹಾಜರಿದ್ದರು.