ಜಗಳೂರು, ಜ. 19- ನಿಮ್ಮ ಆಶೀರ್ವಾದವೇ ನನ್ನ ಸಾಧನೆಗೆ ಶ್ರೀರಕ್ಷೆಯಾಗಿದೆ. ಜನತೆಯ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.
ಕರ್ನಾಟಕ ಅಮೆಚೂರ್ ಕಬಡ್ಡಿ ಫೆಡರೇಷನ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹಾಗೂ ಎಸ್.ವಿ.ಆರ್. ಅಭಿಮಾನಿ ಬಳಗದಿಂದ ಆಯೋಜಿಸಿದ್ದ
ರಾಜ್ಯಮಟ್ಟದ ಕರ್ನಾಟಕ ಕಬಡ್ಡಿ ಚಾಂಪಿ ಯನ್ ಶಿಪ್ ಹೊನಲುಬೆಳಕಿನ ಪಂದ್ಯಾವಳಿ ಯಲ್ಲಿ ವಿಜೇತ ತಂಡಗಳಿಗೆ ಜಿ.ಎಂ.
ಸಿದ್ದೇಶ್ವರ್ ಕಪ್, ಪ್ರಶಸ್ತಿ, ನಗದು ಬಹು ಮಾನ ವಿತರಿಸಿ ಅವರು ಮಾತನಾಡಿದರು.
ಮುಂದಿನ ವರ್ಷ ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡೆ ನಡೆಸಲು ಉತ್ಸುಕನಾಗಿರುವೆ. ಮುಂಬರುವ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಕಿಕ್ಕಿರಿದು ತುಂಬಿದ್ದ ಜನಸ್ತೋಮಕ್ಕೆ ಅವರು ಮನವಿ ಮಾಡಿದರು.
ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವೆ. ಸಿರಿಗೆರೆ ಶ್ರೀಗಳ ಆಶೀ ರ್ವಾದದಿಂದ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಸಹಕಾರದಿಂದ ಮೂರು ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿರುವೆ. ಈ ಸಾಧನೆಗಳಿಗೆ ಸಂಸದ ಸಿದ್ದೇಶ್ವರ ಅವರು ಶ್ರೀರಕ್ಷೆಯಾಗಿದ್ದಾರೆ ಎಂದು ರಾಮಚಂದ್ರ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ರಾಮಚಂದ್ರ, ಕ್ಷೇತ್ರದಲ್ಲಿ ಅಭಿ ವೃದ್ಧಿಯ ಜೊತೆಗೆ ಕ್ರೀಡಾಕೂಟ ನಡೆಸಿ ಯುವಕರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಶ್ಲ್ಯಾಘಿಸಿದರು.
ಶ್ರೀಮತಿ ಇಂದಿರಾ ರಾಮಚಂದ್ರ, ಶ್ರೀಮತಿ ಗಾಯತ್ರಿ ಸಿದ್ದೇಶ್ವರ್, ಪ.ಪಂ. ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷೆ ನಿರ್ಮಲ, ಜಿ.ಪಂ. ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಮಂಡಲ ಅಧ್ಯಕ್ಷ ಹೆಚ್.ಸಿ. ಮಹೇಶ್, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಹೆಚ್. ನಾಗರಾಜ್, ಗಡಿಮಾಕುಂಟೆ ಸಿದ್ದೇಶ್, ಡಿ.ವಿ. ನಾಗಪ್ಪ, ಬಿಸ್ತುವಳ್ಳಿ ಬಾಬು, ಬಿದರಕೆರೆ ರವಿ, ಶ್ರೀನಿವಾಸ್ ದಾಸಕರಿಯಪ್ಪ, ಪಣಿಯಾಪುರ ಲಿಂಗರಾಜ್, ಪ.ಪಂ. ಸದಸ್ಯರು ಮತ್ತು ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.