ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಗೆ ಒತ್ತು ನೀಡಿದ ತರಳಬಾಳು ವಿದ್ಯಾಸಂಸ್ಥೆ

ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಗೆ ಒತ್ತು ನೀಡಿದ ತರಳಬಾಳು ವಿದ್ಯಾಸಂಸ್ಥೆ

ಎಲೆಬೇತೂರು ಶಾಲಾ ವಾರ್ಷಿಕೋತ್ಸವದಲ್ಲಿ ಬಿ. ವಾಮದೇವಪ್ಪ

ದಾವಣಗೆರೆ, ಜ. 17- ತರಳಬಾಳು ವಿದ್ಯಾಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಗೆ ಒತ್ತು ನೀಡುವುದರ ಮೂಲಕ  ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಶೈಕ್ಷಣಿಕ ಉನ್ನತಿಗೆ ಪ್ರೋತ್ಸಾಹ ನೀಡಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.

ಎಲೆಬೇತೂರು ಗ್ರಾಮದ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಹಾಗೂ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಹಾಗೂ ಶಾಲಾ ವಾರ್ಷಿಕೋತ್ಸವ ಮತ್ತು   ಕಾಂಕ್ರೀಟ್ ರಸ್ತೆ ಉದ್ಘಾಟನೆ, ಶಾಲಾ ಕಾಂಪೌಂಡ್ ಉದ್ಘಾಟನೆ ಹಾಗೂ ತರಳಬಾಳು ಸಿರಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಅಧ್ಯಕ್ಷ ಎಂ. ಬಸವರಾಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಧ್ಯಕ್ಷರಾದ ಹೆಚ್. ಬಸವರಾಜಪ್ಪ ಅವರು ಪುಟಗನಾಳು ರಸ್ತೆಯಲ್ಲಿನ ನೀರಿನ ಟ್ಯಾಂಕ್ ರಸ್ತೆ ಉದ್ಘಾಟಿಸಿದರು. 

ಶಾಲಾ ಕಾಂಪೌಂಡನ್ನು ಎಂಎಲ್ಸಿ ಮೋಹನ್ ಕೊಂಡಜ್ಜಿ ಅವರ ಸೋದರ ಪುತ್ರ ನಿಖಿಲ್ ಕೊಂಡಜ್ಜಿ, ಉದ್ಘಾಟಿಸಿದರು. ಎ.ಕೆ. ಫೌಂಡೇಷನ್‌ ಅಧ್ಯಕ್ಷ ಬಿ. ಕೊಟ್ರೇ ಶ್, ಗ್ರಾ.ಪಂ. ಅಧ್ಯಕ್ಷರಾದ ಶ್ರೀಮತಿ ಶಾಂತಮ್ಮ ಕೆ.ಎಂ. ಬಸವನಗೌಡ್ರು ಕಲಪನಹಳ್ಳಿ, ತರಳಬಾಳು ಆಂಗ್ಲ ಮಾಧ್ಯ ಮ ಶಾಲೆಯ ಕಾರ್ಯದರ್ಶಿ ಬಿ. ವಿರೂಪಾಕ್ಷಪ್ಪ, ಎಪಿ ಎಂಸಿ ಮಾಜಿ ಅಧ್ಯಕ್ಷ ಬಿ. ಪ್ರಭು, ಜಿ.ಪಂ. ಮಾಜಿ ಸದಸ್ಯ ಬಿ. ಕರಿಬಸಪ್ಪ, ಗ್ರಾ.ಪಂ. ಉಪಾಧ್ಯಕ್ಷರಾದ ಶ್ರೀಮತಿ ಅಂಜಮ್ಮ ಹನುಮಂತಪ್ಪ, ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢ ಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ. ಹಲಗಣ್ಣನವರ, ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಬಿ.ಎಂ. ಶಶಿಕಲಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತ ರಿದ್ದರು.  

error: Content is protected !!