ಬೇಸಿಗೆಗೆ ಪಾರ್ದಾಪಣೆ ಮಾಡುವ ಕಾಲ ಸಂಕ್ರಾಂತಿ ಹಬ್ಬ

ಬೇಸಿಗೆಗೆ ಪಾರ್ದಾಪಣೆ ಮಾಡುವ ಕಾಲ ಸಂಕ್ರಾಂತಿ ಹಬ್ಬ

ಹರಪನಹಳ್ಳಿ, ಜ.15- ಸಂಕ್ರಾಂತಿ ಹಬ್ಬ ಚಳಿಗಾಲ ಮುಗಿಸಿ ಬೇಸಿಗೆ ಕಾಲಕ್ಕೆ ಪಾರ್ದಾಪಣೆ ಮಾಡುವ ಕಾಲ. ಈ ಹಬ್ಬದಲ್ಲಿ ಎಳ್ಳು-ಬೆಲ್ಲ ಹಂಚಿ ಆಚರಣೆ ಮಾಡುವುದರಲ್ಲಿ ವೈಜ್ಞಾನಿಕ ಮಹತ್ವವಿದೆ. ಸತತವಾಗಿ ಆರು ವರ್ಷಗಳ ಕಾಲ ಕಲೆ, ಸಾಹಿತ್ಯ, ಸಂಗೀತಕ್ಕೆ ಆದ್ಯತೆ ನೀಡಿದ್ದು, ಈ ಬಾರಿ ವಿಭಿನ್ನವಾದ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ತಾಲ್ಲೂಕಿನ ತಾವರಗೊಂದಿ ಗ್ರಾಮದ ನದಿ ತಟದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಎಂ.ಪಿ.ರವೀಂದ್ರ ಪ್ರತಿಷ್ಠಾನ ಹಾಗೂ ಎಂ.ಪಿ.ಲತಾ ಅಭಿಮಾನಿಗಳ ಬಳಗದಿಂದ ಕರ್ನಾಟಕ ಜಾನಪದ ನೃತ್ಯ ದರ್ಶನಂ ಹಾಗೂ ಔತಣಕೂಟ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಿನಿಮಾ, ಧಾರಾವಾಹಿಗಳ ಭರಾಟೆಗಳ ಮಧ್ಯೆ ಗ್ರಾಮೀಣ ಸೊಗಡಿನ ಕಲೆಗಳನ್ನು ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಕಳೆದ ಬಾರಿ ದೇಶೀಯ ಕಲೆಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಈ ಬಾರಿ ಕರ್ನಾಟಕದ ಕಲೆಗಳಾದ ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ, ಭರತನಾಟ್ಯದಂತಹ ಕಲೆಗಳನ್ನು ಪ್ರದರ್ಶಿಸಲಾಗುತ್ತಿದೆ. ತಾವೆಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಎಳ್ಳು-ಬೆಲ್ಲ ನೀಡಿ ಸಂಕ್ರಾಂತಿಯ ಶುಭಾಶಯ ಕೋರಿದರು.

ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು, ಆಗಮಿಸಿದವರಿಗೆಲ್ಲರಿಗೂ ರೊಟ್ಟಿ, ಬುತ್ತಿ, ಸೊಪ್ಪು, ಅನ್ನ, ಸಾರು ಸೇರಿದಂತೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಡೊಳ್ಳು ಕುಣಿತ ಹಾಗೂ ಲಂಬಾಣಿ ನೃತ್ಯ, ಸುಗ್ಗಿ ಹಾಡು, ಪೂಜಾ ಕುಣಿತ, ಕೊಡವ ನೃತ್ಯ, ಪಟ ಕುಣಿತ ನೆರೆದಿದ್ದ ಜನರ ಮನಸೂರೆಗೊಳಿಸಿದವು. ಈ ವೇಳೆ ತಾವರಗೊಂದಿ, ನಿಟ್ಟೂರು ಗ್ರಾಮಸ್ಥರು ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಎಂ.ಪಿ.ಲತಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನದಿ ತಟದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. 

ಈ ಸಂದರ್ಭದಲ್ಲಿ ಹೆಚ್.ಎಂ.ಮಲ್ಲಿಕಾರ್ಜುನ,
ಗೌತಮ ಪ್ರಭು, ಪುಷ್ಪಾ ದಿವಾಕರ್, ಐಗೋಳ್ ಚಿದಾನಂದಪ್ಪ, ಜಿಪಂ ಮಾಜಿ ಸದಸ್ಯರಾದ ತೆಲಿಗಿ ಈಶಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ್, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ, ಅನುರಾಧ ಕೊಟ್ರೇಶ್, ಮತ್ತಿಹಳ್ಳಿ ಶಿವಣ್ಣ, ಪುರಸಭೆ ಸದಸ್ಯರಾದ ಎಂ.ವಿ.ಅಂಜಿನಪ್ಪ, ಗೊಂಗಡಿ ನಾಗರಾಜ್, ಲಾಟಿ ದಾದಾಪೀರ್, ಗಣೇಶ್ ಹಲುವಾಗಲು ಗ್ರಾಪಂ ಅಧ್ಯಕ್ಷ ರುದ್ರಪ್ಪ, ಎಚ್.ಟಿ.ವನಜಾಕ್ಷಮ್ಮ, ಶಿವಯೋಗಿ,  ಗುಂಡಗತ್ತಿ ನೇತ್ರಾವತಿ, ಲಕ್ಷ್ಮಿ
ಚಂದ್ರಶೇಖರ್, ಭಾಗ್ಯಮ್ಮ, ರತ್ನಮ್ಮ ಸೋಮಪ್ಪ, ಮುಖಂಡರಾದ ಹಲುವಾಗಲು ಎನ್.ಟಿ. ಸೋಮಣ್ಣ, ಕಣಿವಿಹಳ್ಳಿ ಚಂದ್ರಶೇಖರ್, ಮೈದೂರು ರಾಮಣ್ಣ,    ಮಂಜುನಾಥ್, ಉದಯಶಂಕರ್, ಶಿವರಾಜ, ಸಾಸ್ವೀಹಳ್ಳಿ ನಾಗರಾಜ್, ಮಂಜುಳಾ ಗುರುರಾಜ್, ಬಾಣದ ಅಂಜಿನಪ್ಪ, ಹಾರಕನಾಳು ಪ್ರಕಾಶಗೌಡ, ಹಲಗೇರಿ ಮಂಜಪ್ಪ, ಎಲ್.ಎಂ.ನಾಯ್ಕ, ಭರಮನಗೌಡ, ನೇಮ್ಯಾನಾಯ್ಕ್, ಎಚ್.ಟಿ.ಹನುಮಂತಪ್ಪ, ವೇದುನಾಯ್ಕ, ಚಿಕ್ಕೇರಿ ಬಸಪ್ಪ, ಪ್ರಸಾದ ಕಾವಡಿ,  ಕುಂಚೂರು ಇಬ್ರಾಹಿಂ, ಶೃಂಗಾರ ತೋಟದ ಅಶೋಕ, ಹುಲಿಕಟ್ಟಿ ಚಂದ್ರಪ್ಪ  ಸೇರಿದಂತೆ, ಇತರರು ಭಾಗವಹಿಸಿದ್ದರು.

error: Content is protected !!