ಮಲೇಬೆನ್ನೂರು, ಜ. 13- ಹೊಳೆಸಿರಿಗೆರೆ ಗ್ರಾಮದ ಶ್ರೀ ಮಾಗೋಡ ಹಾಲಪ್ಪ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹರಿಹರ ತಾಲ್ಲೂಕಿನ ಪ್ರೌಢಶಾಲೆಗಳ ಆಂಗ್ಲ ಭಾಷಾ ಶಿಕ್ಷಕರ ಕಾರ್ಯಾಗಾರವನ್ನು ಮಾಗೋಡ ಹಾಲಪ್ಪ ಪ್ರೌಢಶಾಲಾ ಸಲಹಾ ಸಮಿತಿ ಅಧ್ಯಕ್ಷರಾದ ಮಾಗೋಡ ಓಂಕಾರಪ್ಪ ಅವರ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು.
ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಮತಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಯೋಗೀಶ್ ನಾಯ್ಕ ಅವರು, ಆಂಗ್ಲ ಭಾಷಾ ವಿಷಯದಲ್ಲಿ ಬರುವಂತಹ ವ್ಯಾಕರಣ ಅಂಶಗಳ ಬಗ್ಗೆ ಸವಿಸ್ತಾರವಾಗಿ ಆಂಗ್ಲ ಭಾಷಾ ಶಿಕ್ಷಕರಿಗೆ ತಿಳಿಸಿದರು.
ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಹೇಗೆ ತಯಾರಿ ಮಾಡಬೇಕೆಂಬ ಕುರಿತು ಮಾಹಿತಿ ನೀಡಿದರು. ಈ ವೇಳೆ ಇತ್ತೀಚೆಗೆ ವಯೋ ನಿವೃತ್ತರಾದ ಕೊಂಡಜ್ಜಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷಾ ಶಿಕ್ಷಕ ಟಿ. ಪತ್ರೇಶ್ ಅವರನ್ನು ಸನ್ಮಾನಿಸಿ, ನಿವೃತ್ತ ಜೀವನಕ್ಕೆ ಶುಭ ಕೋರಲಾಯಿತು.
ಹರಿಹರ ತಾ. ಆಂಗ್ಲ ಭಾಷಾ ಶಿಕ್ಷಕರ ಕ್ಲಬ್ ಅಧ್ಯಕ್ಷ ಮರುಳಸಿದ್ದಪ್ಪ, ಕಾರ್ಯದರ್ಶಿ ಐ. ಕೊಟ್ರೇಶ್, ಶಿಕ್ಷಕರಾದ ರೇವಣಸಿದ್ದಪ್ಪ ಅಂಗಡಿ, ಕೃಷ್ಣಮೂರ್ತಿ, ಶ್ರೀಮತಿ ವೀಣಾ, ಬಿ.ಆರ್. ಕುಮಾರಚಾರಿ, ನಾಗರಾಜ್, ಶ್ರೀಮತಿ ನಯನ, ಶ್ರೀಮತಿ ಶಶಿಕಲಾ ಮತ್ತು ಮಾಗೋಡ ಹಾಲಪ್ಪ ಪ್ರೌಢಶಾಲೆಯ ಸಲಹಾ ಸಮಿತಿ ಸದಸ್ಯ ಕುಂದೂರು ಮಂಜಪ್ಪ ಸೇರಿದಂತೆ ಇನ್ನೂ ಅನೇಕ ಶಿಕ್ಷಕರು ಕಾರ್ಯಾಗಾರದಲ್ಲಿದ್ದರು. ಮಾಗೋಡ ಹಾಲಪ್ಪ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ. ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು.