ಆನಗೋಡಿನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಚಾಲನೆ

ಆನಗೋಡಿನಲ್ಲಿ ಕ್ರಿಕೆಟ್ ಪಂದ್ಯಕ್ಕೆ ಚಾಲನೆ

ದಾವಣಗೆರೆ, ಜ. 13 – ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ತಾಲ್ಲೂಕಿನ ಆನಗೋಡಿನ ಕಾಲೇಜು ಮೈದಾನದಲ್ಲಿ ಸಂಕ್ರಾಂತಿ ಕಪ್ 2023ನ್ನು ಹಮ್ಮಿಕೊಳ್ಳಲಾಗಿದೆ. ಮಾಯಕೊಂಡ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಜಿ.ಎಸ್. ಶ್ಯಾಮ್ ಸಾರಥ್ಯದಲ್ಲಿ ಆನಗೋಡಿನ ವಿಶ್ವಬಂಧು ಕ್ರಿಕೆಟರ್‌ ನಿಂದ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರಿಕೆಟ್ ಹಬ್ಬಕ್ಕೆ ಬಯಲು ಸೀಮೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಜೀವನ್‌ಮೂರ್ತಿ ಚಾಲನೆ ನೀಡಿದರು.

ಆನಗೋಡು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನ ಪಡೆದಿದೆ, ಅದರಂತೆ ಕ್ರೀಡೆಯಲ್ಲೂ ಮಹತ್ತರ ಸಾಧನೆ ಗೈದಂತಹ ಗ್ರಾಮ, ಇಂತಹ ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದ್ದು ಸಂತಸದ ಸಂಗತಿ, ಇದರ ಜೊತೆಗೆ ಕ್ರೀಡಾ ಮನೋಭಾವನೆಯಿಂದ ಆಟವಾಡಿ ಆರೋಗ್ಯಕರ ಪಂದ್ಯಕ್ಕೆ ಅನುವು ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಮಾಯಕೊಂಡ ಮಂಡಲದ ಅಧ್ಯಕ್ಷ ಶ್ಯಾಗಲೆ ದೇವೇಂದ್ರಪ್ಪ ಮಾತನಾಡಿ, ನಿರ್ಣಾಯಕರ ನಿರ್ಣಯಕ್ಕೆ ಗೌರವ ಸಲ್ಲಿಸಿ ಪ್ರತಿಯೊಬ್ಬ ಕ್ರೀಡಾಪಟು ಕ್ರೀಡಾ ಮನೋಭಾವದಿಂದ ಆಟವಾಡಿ ಪಂದ್ಯಾವಳಿಗೆ ಗೌರವ ಸಲ್ಲಿಸಬೇಕು ಎಂದರು. 

ಮಾಯಕೊಂಡ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಜಿ.ಎಸ್ ಶ್ಯಾಮ್ ಮಾತನಾಡಿ, ಕ್ರಿಕೆಟ್ ಆಟ ಯುವಕರಿಗೆ ಕ್ರೀಡಾಸ್ಫೂರ್ತಿ ನೀಡುವಂತಹ ಆಟ, ಇದರ ಜೊತೆಗೆ  ಕಬಡ್ಡಿ, ಖೋಖೋ, ವಾಲಿಬಾಲ್ ಮುಂತಾದ ಪಂದ್ಯಗಳನ್ನು ಈಗಾಗಲೇ ಆಯೋಜನೆ ಮಾಡಲಾಗಿತ್ತು, ಇಲ್ಲಿನ ಯುವಕರು ಕ್ರಿಕೆಟ್ ಪಂದ್ಯಾವಳಿಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಯೊಜನೆ ಮಾಡಲಾಯಿತು ಎಂದು ತಿಳಿಸಿದರು.

ಪಂದ್ಯಾವಳಿಯಲ್ಲಿ ಗೆದ್ದ ತಂಡಗಳಿಗೆ 25 ಸಾವಿರ, 10 ಸಾವಿರ, 5 ಸಾವಿರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನದ ಜೊತೆಗೆ ಟ್ರೋಪಿ ನೀಡಲಾಗುವುದು. ಕ್ರೀಡೆಯ ಜೊತೆಗೆ ಮಾಯಕೊಂಡ ಕ್ಷೇತ್ರದ  ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದು, ಅಭಿವೃದ್ಧಿಯ ನೀಲನಕ್ಷೆ ಈಗಾಗಲೇ ಸಿದ್ದಪಡಿಸಲಾಗಿದೆ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ಮಾಯಕೊಂಡ ಮಂಡಲದ ಪ್ರಧಾನ ಕಾರ್ಯದರ್ಶಿ ಓಂಕಾರಪ್ಪ, ಪ್ಯಾಟಿ ಹನುಮಂತಪ್ಪ, ಬಿ.ಟಿ ಸಿದ್ದಪ್ಪ, ಪ್ರವೀಣ್, ಕಲ್ಲೇಶ್, ಮಾದಪ್ಪ, ನೀಲಮ್ಮ, ಮಂಜಮ್ಮ, ಕರಬಸಪ್ಪ, ಸಮಿವುಲ್ಲಾ, ನಾಗರಾಜ್, ಹನುಮಂತಪ್ಪ, ತಿಪ್ಪಣ್ಣ, ರಾಜಶೇಖರ್, ಮಲ್ಲಿಕಾರ್ಜುನ್, ಮಲ್ಲಣ್ಣ, ಸಿದ್ದೇಶ್, ಸೇರಿದಂತೆ  ಇತರರು ಉಪಸ್ಥಿತರಿದ್ದರು.

error: Content is protected !!