ರಾಣೇಬೆನ್ನೂರು : ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ರೊಟ್ಟಿ ತಯಾರಿಕೆ

ರಾಣೇಬೆನ್ನೂರು : ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ರೊಟ್ಟಿ ತಯಾರಿಕೆ

ರಾಣೇಬೆನ್ನೂರು, ಜ. 10- ಸ್ಥಳೀಯ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಜಿ.ಪಂ. ಮಾಜಿ ಸದಸ್ಯ ಹಾಗೂ ವಾಕರಸಾ  ಸಂಸ್ಥೆ ನಿರ್ದೇಶಕ ಸಂತೋಷಕುಮಾರ್ ಪಾಟೀಲ ಇದೇ ದಿನಾಂಕ 23 ರಂದು ನಗರದಲ್ಲಿ ಹಮ್ಮಿಕೊಂಡಿರುವ ಚುನಾವಣಾ ಪ್ರಣಾಳಿಕೆ ಬಿಡುಗಡೆಗೆ ಆಗಮಿಸಲು ತಾಲ್ಲೂಕಿನ ಚಿಕ್ಕಹರಳಹಳ್ಳಿ ಮಹಿಳೆಯರು ರೊಟ್ಟಿ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಕ್ಷೇತ್ರ ವ್ಯಾಪ್ತಿಯ 87 ಗ್ರಾಮಸ್ಥರು ಆಗಮಿಸಲಿದ್ದು, ಎಲ್ಲರೂ ತಮ್ಮ ರೊಟ್ಟಿ ಬುತ್ತಿಯನ್ನು ತಾವೇ ಕಟ್ಟಿಕೊಂಡು ಬರಲು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೊದಲಿಗೆ ತಾಲ್ಲೂಕಿನ ಚಿಕ್ಕಹರಳಹಳ್ಳಿ ಗ್ರಾಮದ 100ಕ್ಕೂ ಅಧಿಕ ಮಹಿಳೆಯರು ಜನಪದ ಗೀತೆಗಳನ್ನು ಹಾಡುತ್ತಾ, ಸಂತಸದಿಂದ ರೊಟ್ಟಿ ಮಾಡುವುದರಲ್ಲಿ ತಲ್ಲೀನರಾಗಿದ್ದರು.

ಗ್ರಾ.ಪಂ. ಸದಸ್ಯ ಮಾಲತೇಶ ನಾನಾಪುರ, ತಿಮ್ಮೇಗೌಡ ಪಾಟೀಲ, ಮಾಲತೇಶ ಕೋಣನವರ, ಹೊನ್ನಪ್ಪ ಜಲ್ಲೇರ, ಅಜ್ಜಪ್ಪ ಕಚ್ಚರವಿ, ಮಲ್ಲೇಶ ಕಟ್ಟಿಮನಿ, ಕರಿಯಪ್ಪ ಮುದ್ದಿ, ವೆಂಕಟೇಶ ಲಮಾಣಿ, ಗೋಪಿ ಲಮಾಣಿ, ಬೀರಪ್ಪ ಲಮಾಣಿ, ಈರಣ್ಣ ಬುಡಪನಹಳ್ಳಿ, ರಾಘವೇಂದ್ರ ಕಮ್ಮಾರ, ಕಿರಣ ಬುಳ್ಳನಗೌಡ್ರ, ಚಂದ್ರು ನಾಯಕ, ನಾಗರಾಜ ಮಡಿವಾಳರ, ಕೊಟ್ರೇಶ ಪೂಜಾರ, ಅಜ್ಜಪ್ಪ ಲಮಾಣಿ ಹಾಗೂ ಗ್ರಾಮದ ಮಹಿಳೆಯರು ಪಾಲ್ಗೊಂಡಿದ್ದರು.

error: Content is protected !!