ಹರಪನಹಳ್ಳಿ : ವಕೀಲರ ಸಂಘದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ
ಹರಪನಹಳ್ಳಿ, ಜ.5 – ಯಾರಲ್ಲಿ ಶಾಂತಿ, ಪರಿಶುದ್ಧತೆ, ಅಧ್ಯಾತ್ಮಿಕತೆ, ಪ್ರಾಮಾಣಿಕತೆ ಇರು ತ್ತದೆಯೋ ಅಂತಹ ವ್ಯಕ್ತಿಯನ್ನು ಭೂಮಂ ಡಲದಲ್ಲಿ ಯಾರು ಅಲುಗಾಡಿಸಲು ಆಗುವು ದಿಲ್ಲ ಎನ್ನುವುದಕ್ಕೆ ಸಿದ್ದೇಶ್ವರ ಸ್ವಾಮೀಜಿ ಉದಾ ಹರಣೆಯಾಗಿದ್ದರು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣ ದಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ವಕೀಲರ ಸಂಘ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ವಿಜಾಪುರದ ಸಿದ್ದೇಶ್ವರ ಸ್ವಾಮಿಜಿ ನಿಧನಕ್ಕೆ ಶ್ರದ್ದಾಂಜಲಿ ಹಾಗೂ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಆಸೆ, ವ್ಯಾಮೋಹ ಇಲ್ಲದ ಮಹಾನ್ ವ್ಯಕ್ತಿ. ಕಾವಿ ವಿವೇಕವನ್ನು ಹೊಂದಿದ ವ್ಯಕ್ತಿಗೆ ಮಾತ್ರ. ನಮ್ಮಂತವರಿಗೆ ಅಲ್ಲ. ಹಾಗಾಗಿ ನಾನು ಕಾವಿ ತೊಡುವುದಿಲ್ಲ ಎಂದು ಭಕ್ತರಿಗೆ ಹೇಳಿದ ವರು. ಬೆಲೆ ಕಟ್ಟಲಾಗದ ವ್ಯಕ್ತಿ ಅವರಾಗಿದ್ದರು. ಕತೆ, ಪ್ರವಚನಗಳ ಮೂಲಕ ಜನರ ಭಾವನೆ ಗಳನ್ನು ಬದಲಾವಣೆ ಮಾಡಿದವರು. ಸಂಪತ್ತಿ ಗಾಗಿ ಆರೋಗ್ಯ ಕಳೆದುಕೊಳ್ಳುತ್ತಾರೆ. ಸಂಪತ್ತು ಬಂದ ಮೇಲೆ ಆರೋಗ್ಯವನ್ನು ಕಾಪಾಡಿಕೊ ಳ್ಳಲು ಸಂಪತ್ತು ಕಳೆದುಕೊಳ್ಳುತ್ತಾರೆ. ಆದರೆ, ಯಾವುದಕ್ಕೂ ಆಸೆ ಪಡದೆ ಅರೋಗ್ಯ ಸಂಪತ್ತು, ಜ್ಞಾನ ಹೊಂದಿದ್ದರು. ಅವರ ಬದುಕಿನಂತೆ ನಾವು ಅವರ ಆದರ್ಶ, ತತ್ವಗಳನ್ನು ಮೈಗೂಡಿಸಿ ಕೊಳ್ಳೋಣ ಎಂದು ಕರೆ ನೀಡಿದರು.
ಸಿವಿಲ್ ಕಿರಿಯ ನ್ಯಾಯಾಧೀಶರಾದ ಫಕ್ಕೀರವ್ವ ಕೆಳಗೇರಿ ಮಾತನಾಡಿ, ನಾನೂ ಅವರ ಪ್ರವಚನಗಳಿಂದ ಪ್ರಭಾವಿತಳಾದೆ, ಅದು ಮರೆಯಲಾಗದ ದಿನವಾಗಿದೆ. ಬಡವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು, ಅವರೊಬ್ಬ ಜ್ಞಾನ ಯೋಗಿಯಾಗಿದ್ದರು. ಅವರನ್ನು ಕಾಣಲು ಅಪಾರ ಜನಸ್ತೋಮ ಸೇರುತ್ತಿತ್ತು. ಅವರ ಪ್ರವಚನಕ್ಕೆ ಹೋದರೆ ಊಟ ಸಹ ಮಾಡುವುದಿಲ್ಲ. ಅವರ ಮಾತುಗಳು ಅರ್ಥಗರ್ಭಿತವಾಗಿರುತ್ತಿದ್ದವು. ಭಕ್ತರಿಗೆ ಯಾವುದೇ ಕೊರತೆಯಾಗದಂತೆ ಅನ್ನ, ನೀರು ಕಲ್ಪಿಸಿದಂತಹ ಯೋಗಿಗಳು. ಅವರ ವ್ಯಕ್ತಿತ್ವಕ್ಕೆ ಅನೇಕರು ಮಾರು ಹೋಗಿದ್ದಾರೆ. ಶಾಂತತೆ ಹಾಗೂ ಸರಳತೆಯನ್ನು ಪಾಲನೆ ಮಾಡುತ್ತಿದ್ದರು. ಯಾವುದನ್ನೂ ಅಪೇಕ್ಷೆ ಪಡುತ್ತಿರಲಿಲ್ಲ. ಇನ್ನೊಬ್ಬರಿಗೆ ಗೊತ್ತಾಗದ ಪವಾಡಗಳು ನಡೆದಿವೆ, ಅವರ ವ್ಯಕ್ತಿತ್ವ, ಸಿದ್ದಾಂತಗಳನ್ನು ಪಾಲಿಸೋಣ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ಅಜ್ಜಪ್ಪ ಮಾತನಾಡಿ, ತನಗಾಗಿ ಬದುಕದೆ, ಸಮಾಜ ಕ್ಕಾಗಿ ಬದುಕಿದ ಮಹಾನ್ ಸಂತ ಸಿದ್ದೇಶ್ವರ ಸ್ವಾಮೀಜಿಯವರ ಸರಳ ಜೀವನದ ಶೈಲಿಯನ್ನು ಮೈಗೂಡಿಸಿಕೊಳ್ಳಬೇಕು. ಪದವಿ, ಸಂಪತ್ತನ್ನು ಅಪೇಕ್ಷೆ ಮಾಡದೆ ಅವರಿಗಾಗಿ ಬಂದ ಪ್ರಶಸ್ತಿ, ಗೌರವಗಳನ್ನು ನಯವಾಗಿ ತಿರಸ್ಕರಿಸುತ್ತಿದ್ದರು ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಜಗದೀಶಗೌಡ ಮಾತನಾಡಿ, ಶ್ರೀಗಳವರ ಸಮೀಪ ಯಾರೂ ಹೋಗುತ್ತಿರಲಿಲ್ಲ, ಅಷ್ಟೊಂದು ದೈವೀಶಕ್ತಿ ಹೊಂದಿದವರಾಗಿದ್ದರು ಎಂದರು.
ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ, ಕಾರ್ಯದರ್ಶಿ ಕೆ.ಆನಂದ, ವಕೀಲರಾದ ಗಂಗಾಧರ ಗುರುಮಠ, ಕೆ.ಜಗದಪ್ಪ. ಕಣಿವಿಹಳ್ಳಿ ಮಂಜುನಾಥ, ಪಿ.ರಾಮನಗೌಡ, ಕೆ.ಚಂದ್ರೇಗೌಡ, ಪಿ.ರೇವಣನ ಗೌಡ, ಐಗೋಳ ಚಿದಾನಂದ, ಕೆ.ಲಿಂಗಾ ನಂದ, ಕೆ.ವಿರೂಪಾಕ್ಷಪ್ಪ, ಉಲಿಯಪ್ಪ, ಬಂಡ್ರಿ ಗೋಣಿಬಸಪ್ಪ, ಮುತ್ತಿಗಿ ಮಂಜುನಾಥ, ರೇವಣಸಿದ್ದಪ್ಪ, ಸಂಗೀತ ಶಿಕ್ಷಕ ಬಸವರಾಜ ಭಂಡಾರಿ ಸೇರಿದಂತೆ ಇತರರು ಇದ್ದರು.