ತಾಲ್ಲೂಕು ಶಾಲಾಭಿವೃದ್ದಿ ಸಮಿತಿ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಶಪ್ಪ
ಹೊನ್ನಾಳಿ, ಜ.5- ತಾಲ್ಲೂಕಿನ ಎಸ್‍ಡಿಎಂಸಿ ಸಮಿತಿಯು ಉತ್ತಮವಾಗಿ ಕೆಲಸ ನಿರ್ವಹಿಸಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಪ್ಪೇಶಪ್ಪ ಹೇಳಿದರು.
ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಎಸ್‍ಡಿಎಂಸಿ ಸಮನ್ವಯ ವೇದಿಕೆ ಮತ್ತು ವನಯಾತ್ರಿ ಸಮಾನ ಮನಸ್ಕರ ಬಳಗ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕು ಶಾಲಾಭಿವೃದ್ದಿ ಸಮಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕು ಎಸ್‍ಡಿಎಂಸಿ ಸಮಿತಿಯು ಸಂಸ್ಥೆಗಳು, ದಾನಿಗಳ ಸಹಾಯದಿಂದ ತಾಲ್ಲೂಕಿನ ಸುರಹೊನ್ನೆ, ಅರಬಗಟ್ಟೆ, ನೇರಲಗುಂಡಿಗಳಲ್ಲಿ ಉತ್ತಮ ಗುಣಮಟ್ಟದ ಎಲ್ಲಾ ಸೌಕರ್ಯ ಹೊಂದಿದ ಸರ್ಕಾರಿ ಶಾಲೆ ಕಟ್ಟುವ ಮೂಲಕ ಸ್ಥಳೀಯರ ಪ್ರಶಂಸೆಗೆ ಕಾರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಶಾಲಾಭಿವೃದ್ದಿ ಸಮತಿ ಅಧ್ಯಕ್ಷ ಎ.ಎಸ್.ಶಿವಲಿಂಗಪ್ಪ, ಸಮಿತಿ ಉತ್ತಮ ರಚನಾತ್ಮಕ ಕಾರ್ಯಗಳಿಗೆ ಮುಂದಾಗಿದೆ, ಇದಕ್ಕೆಲ್ಲಾ ಹಿಂದಿನ ಬಿಆರ್‍ಸಿ ಅಧಿಕಾರಿ ಉಮಾಶಂಕರ ಕಾರಣ ಎಂದರು.
ಉಮಾಶಂಕರ ಮಾತನಾಡಿ, ವಿದ್ಯಾರ್ಥಿಗಳು ದೇವರ ಸಮಾನ ಎನ್ನುವ ನಾವು ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಗುಣಗುಟ್ಟದ ಶಿಕ್ಷಣ ದೊರೆಯುವಂತೆ ಮುಂದಾಗಬೇಕಿದೆ, ಶಾಲೆ ಮುಖ್ಯೋಪಾಧ್ಯಾಯರ ಹಾಗೂ ಸಹ ಶಿಕ್ಷಕರ ಜಗಳಗಳಿಂದ ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಕುಂಠಿತವಾಗದಿರುವಂತೆ ಸಲಹೆ ನೀಡಿ, ಹೊನ್ನಾಳಿ ಸಮಿತಿ ಉತ್ತಮ ಕೆಲಸ ನಿರ್ವಹಿಸಿ ಕ್ರಿಯಾಶೀಲ ತಂಡವಾಗಿದೆ ಎಂದರು.
ಹೊನ್ನಾಳಿ ಪ್ರೌಢಶಾಲೆಯ ಸದಸ್ಯ, ನಿವೃತ್ತ ಪ್ರಾಂಶುಪಾಲ ಶಿವಶಂಕರಯ್ಯ ಮಾತನಾಡಿ ಕೌಶಲ್ಯ, ಕುಶಲತೆ, ಪರಿಣಿತಿ ಹೊಂದಿದ ವಿದ್ಯಾರ್ಥಿಗಳನ್ನು ಇಲಾಖೆ ಗೌರವಿಸಿ ಹುದ್ದೆ ದೊರೆಯುಂತೆ ಮಾಡುತ್ತದೆ. ಇದರ ಲಾಭ ಪಡೆಯಲು ಸಮಿತಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕಾಗಿದೆ ಎಂದರು.
ಶಾಲಾಭಿವೃದ್ದಿ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ರುದ್ರನಾಯ್ಕ, ಅಕ್ಷರ ದಾಸೋಹ ಅಧಿಕಾರಿ ರುದ್ರಪ್ಪ, ಬಿಆರ್‍ಪಿ ಅರುಣ್‍ಕು ಮಾರ, ಉಪಪ್ರಾಂಶುಪಾಲ ರಂಗನಾಥ, ಕೆ.ಬಿ.ಸುಭಾಶ್, ಸಾವಿತ್ರಮ್ಮ, ಸತೀಶ್, ರಮೇಶ್, ಪಾರ್ವತಮ್ಮ, ಮಂಜುನಾಥ್, ರತ್ನಮ್ಮ ಸೇರಿ ದಂತೆ ಇತರರು ಕಾರ್ಯಕ್ರಮದಲ್ಲಿ ಯುಪುಸ್ಥಿತರಿದ್ದರು.