ದಾವಣಗೆರೆ, ಜ.5- ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕಳೆದ ವಾರ ನಡೆದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಅಂತರರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ತೋಳಹುಣಸೆಯ ಶಿವಗಂಗೋತ್ರಿ ಪಿ.ಎಸ್.ಎಸ್.ಇ.ಎಂ.ಆರ್.ಶಾಲೆಯ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿ ‘ಕರ್ನಾಟಕದ ಉತ್ತಮ ಬ್ಯಾಂಡ್ ತಂಡ ಪ್ರಶಸ್ತಿ’ ಪಡೆದಿರುತ್ತಾರೆ.
ಈ ಶಾಲಾ ಬ್ಯಾಂಡ್ ತಂಡದಲ್ಲಿ 29 ಸ್ಕೌಟ್ಸ್ ವಿದ್ಯಾರ್ಥಿಗಳು, 11 ಗೈಡ್ಸ್ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಬ್ಯಾಂಡ್‍ನ ಮಾಸ್ಟರ್ ಷಡಾಕ್ಷರದೇವ ಮತ್ತು ಗೈಡ್ ಕ್ಯಾಪ್ಟನ್ ವೀಣಾರವರು ಜಾಂಬೂರಿಯಲ್ಲಿ ಭಾಗವಹಿಸಿದ್ದರು.
ಶಾಲಾ ಆಡಳಿತ ಮಂಡಳಿ, ಶಾಲಾ ಮುಖ್ಯಸ್ಥರಾದ ಮಂಜುನಾಥ್ ರಂಗರಾಜು, ಮತ್ತಿತರರು ಮಕ್ಕಳನ್ನು ಅಭಿನಂದಿಸಿದ್ದಾರೆ.