12 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

12 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಹರಪನಹಳ್ಳಿ, ಡಿ.30 – ತಾಲ್ಲೂಕಿನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಪಂಚಾಯತ್ ರಾಜ್ಯ ಇಲಾಖೆಯ ಅಡಿಯಲ್ಲಿ ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಒಟ್ಟು 4 ಕೋಟಿರೂ. ವೆಚ್ಚದಲ್ಲಿ ಕೆರೆ ಏರಿ ಅಭಿವೃದ್ಧಿ ಮತ್ತು ಹಳ್ಳಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.

ಕಂಚಿಕೆರೆ ಮುಖ್ಯ ರಸ್ತೆಯಿಂದ ಕೋಡಿ ಸಿದ್ದೇಶ್ವರ ಮಠದವರೆಗೆ ರಸ್ತೆ ಕಾಮಗಾರಿ, ರಾಗಿಮಸಲವಾಡ ಗ್ರಾಮದ ಸಮೀಪದ ಕೋಡಿ ತಾಂಡಾ ರಸ್ತೆಯಿಂದ ನಾಗಲಾಪುರ, ಶಂಕರನಹಳ್ಳಿ ರಸ್ತೆ ಕಾಮಗಾರಿ, ಕಡತಿ-ನಂದ್ಯಾಲ ಕ್ಯಾಂಪ್ ನಿಂದ ಹಾಗೂ ಮತ್ತೂರು ಗ್ರಾಮದವರೆಗೆ ರಸ್ತೆ ಕಾಮಗಾರಿ, ಮತ್ತೂರು ಗ್ರಾಮದಿಂದ ನಿಟ್ಟೂರು ಗ್ರಾಮದ ವರೆಗೆ ರಸ್ತೆ ಕಾಮಗಾರಿ, ಹಲುವಾಗಲು ಗ್ರಾಮದಿಂದ ಕುಂಚೂರು ಕೆರೆ ಸೇರುವ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅರಸನಾಳು ಗ್ರಾಮದ ಹಳ್ಳದ ಹತ್ತಿರ, ಕೆ.ಕಲ್ಲಹಳ್ಳಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್‍ಡ್ಯಾಂ, ಹಂಪಾಪುರ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಕೆ.ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಕೊಠಡಿ, ಗ್ರಾಮದಲ್ಲಿ ಕ್ಷೇಮ ಕೇಂದ್ರ ಕಟ್ಟಡವನ್ನು ಉದ್ಘಾಟಿಸಿದರು.

ನಂತರ ನಾರಾಯಣಪುರ ಗ್ರಾಮದ ಕೆರೆ ಅಭಿವೃದ್ಧಿ, ಬಂಡ್ರಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ ಕಾನಹಳ್ಳಿ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್ ಡ್ಯಾಂ, ಹರಪನಹಳ್ಳಿ ಪಟ್ಟಣದಲ್ಲಿರುವ ವಾಲ್ಮೀಕಿ ನಗರದ 26ನೇ ವಾರ್ಡ್‌ನಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ಉದ್ಯಾನವನ ಹಾಗೂ 27ನೇ ವಾರ್ಡ್‌ನಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಾಗಳಿ ಕೊಟ್ರೇಶಪ್ಪ, ನ್ಯಾಯವಾದಿ ಕೆಂಗಳ್ಳಿ ಪ್ರಕಾಶ್, ಆರ್.ಲೋಕೇಶ್, ಎಂ.ಮಲ್ಲೇಶ, ಶಿವಾನಂದ, ಜಾವೀದ್, ಗ್ರಾಪಂ ಅಧ್ಯಕ್ಷ ರುದ್ರಪ್ಪ, ದ್ಯಾಮಪ್ಪ, ಮಾರುತಿ, ಮಂಜುನಾಥ, ಕಲ್ಲಹಳ್ಳಿ ಡಾ.ಬಿದರಿ ಕೊಟ್ರೇಶ, ಈರಣ್ಣ, ಪರಸಪ್ಪ, ಮಲ್ಲಿಕಾರ್ಜುನ, ಬಸವರಾಜ, ದುರುಗಪ್ಪ, ಭೀಮಪ್ಪ, ಈಶಪ್ಪ, ಶೇಖಪ್ಪ, ಜೋಗಿ ಬಸವರಾಜ, ಯಲ್ಲಾಪುರ ನಾಗರಾಜ, ತೆಲಿಗಿ ಜಿ.ನಾಗರಾಜ, ವೀರೇಶ್, ಗುತ್ತಿಗೆದಾರರಾದ ನಾಗರಾಜ, ಚಂದ್ರಪ್ಪ, ಈಶಪ್ಪ, ಮಂಜಪ್ಪ ಹರಿಹರ ಸೇರಿದಂತೆ ಇತರರು ಇದ್ದರು.

error: Content is protected !!