ದಾವಣಗೆರೆ, ಡಿ. 29 – ಇತ್ತೀಚಿಗೆ ಮೈಸೂರಿನಲ್ಲಿ ನಡೆದ 3ನೇ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ಶಿಪ್ನಲ್ಲಿ ನಗರದ ವೈ.ಆರ್.ಪಿ ಕರಾಟೆ ಅಂಡ್ ಸೆಲ್ಫ್ ಡಿಫೆನ್ಸ್ ಸ್ಕೂಲಿನ 12 ವಿದ್ಯಾರ್ಥಿಗಳು ಕತಾ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ, 6 ಸ್ವರ್ಣ, 3 ರಜತ ಹಾಗೂ 9 ಕಂಚಿನ ಪದಕಗಳನ್ನು ಪಡೆದಿದ್ದಾರೆ. ಇವರಿಗೆ ತರಬೇತುದಾರರಾದ ಸೆನ್ಸಾಯ್ ಎಸ್. ಯುವರಾಜ್, ಸೆನ್ಸಾಯ್ ಎಸ್. ರವಿ ನಾರಾಯಣ್ ಮತ್ತು ಸೆನ್ಸಾಯ್ ಜಿ. ಪ್ರವೀಣ್ ಹಾಗೂ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಂದಿರದ ಅಧ್ಯಕ್ಷರು ಪಿ.ಸಿ. ಮಹಾಬಲೇಶ್ ಮತ್ತು ಕಾರ್ಯದರ್ಶಿ ಬಿ.ಎಸ್. ಸುಬ್ರಮಣ್ಯ ಇವರುಗಳು ಅಭಿನಂದಿಸಿದ್ದಾರೆ.
February 6, 2025