ಖೋ-ಖೋ ಚಾಂಪಿಯನ್‍ಶಿಪ್‍ಗೆ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳು ಆಯ್ಕೆ

ಖೋ-ಖೋ ಚಾಂಪಿಯನ್‍ಶಿಪ್‍ಗೆ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳು ಆಯ್ಕೆ

ದಾವಣಗೆರೆ, ಡಿ. 28 – ಕೇರಳದ ಕ್ಯಾಲಿಕಟ್‍ನಲ್ಲಿ ನಡೆಯುವ ದಕ್ಷಿಣ ಭಾರತ ಪುರುಷರ ಅಂತರ ವಿಶ್ವವಿದ್ಯಾಲಯದ ಖೋ-ಖೋ ಚಾಂಪಿಯನ್‍ಶಿಪ್ ಪಂದ್ಯಾವಳಿಗೆ ನಗರದಲ್ಲಿರುವ ಕ್ರೀಡಾ ವಸತಿ ನಿಲಯದ 10 ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ.

ಪಂದ್ಯಾವಳಿಯು ನಾಳೆ ದಿನಾಂಕ 29 ಮತ್ತು 30 ರಂದು ನಡೆಯಲಿದ್ದು, ನಗರದ ಕ್ರೀಡಾ ವಸತಿ ನಿಲಯದ ಖೋ-ಖೋ ಕ್ರೀಡಾ ಪಟುಗಳಾದ ಅರ್ಜುನ (ತಂಡದ ನಾಯಕ), ಮಹಮದ್ ತಾಸೀನ್, ಲಕ್ಷ್ಮಣ, ಜೆ.ಜಿ. ಶರತ್, ಎಸ್.ಗಗನ್, ಎಸ್.ಕೆ. ಸಿದ್ಧಾರೂಢ, ಶರೀಫ್, ವೇಣುಗೋಪಾಲ್, ರವಿಕುಮಾರ್ ಮತ್ತು ಆಸೀಫ್ ಪಂದ್ಯಾ ವಳಿಯಲ್ಲಿ ಭಾಗವಹಿಸುವರು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಯಲಕ್ಷ್ಮಿಬಾಯಿ ತಿಳಿಸಿದ್ದಾರೆ.

error: Content is protected !!