ನ್ಯಾಯಮೂರ್ತಿ ಸಂತೋಷ ಹೆಗಡೆ ಅವರಿಗೆ ಜೆ.ಎಂ. ಇಮಾಮ್ ಪ್ರಶಸ್ತಿ-ಜಗಳೂರಿನಲ್ಲಿ ಇಂದು ಪ್ರಶಸ್ತಿ ಪ್ರದಾನ ಸಮಾರಂಭ

ನ್ಯಾಯಮೂರ್ತಿ ಸಂತೋಷ ಹೆಗಡೆ ಅವರಿಗೆ ಜೆ.ಎಂ. ಇಮಾಮ್ ಪ್ರಶಸ್ತಿ-ಜಗಳೂರಿನಲ್ಲಿ ಇಂದು  ಪ್ರಶಸ್ತಿ ಪ್ರದಾನ ಸಮಾರಂಭ

ಜಗಳೂರು, ಡಿ.26- ಮಹಮ್ಮದ್ ಇಮಾಮ್ ಸಾಹೇಬರು ಧೀಮಂತ, ವಸ್ತುನಿಷ್ಠ, ಸಂಪನ್ನ, ಅಪರೂಪದ  ರಾಜಕಾರಣಿ. ಮೈಸೂರು  ಮಹಾರಾಜರಿಂದ `ಮುಶೀರ್ ಉಲ್ ಮುಲ್ಕ್’ ಎಂಬ ಬಿರುದನ್ನು ಪಡೆದು ಸಚಿವರಾಗಿ, ಸ್ವಾತಂತ್ರ್ಯ ನಂತರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ, ಲೋಕ ಸಭಾ ಸದಸ್ಯರಾಗಿ ಜನಸಾಮಾ ನಸದಲ್ಲಿ ಇಂದಿಗೂ ಹಸಿರಾಗಿರುವ ವ್ಯಕ್ತಿ. ಹಲವಾರು ಹಳ್ಳಿಗಳಲ್ಲಿ ಕೆರೆಗಳನ್ನು ನಿರ್ಮಿಸಿ ಅಭಿವೃದ್ಧಿಗಾಗಿ ಶ್ರಮಿಸಿದ ಜೆ.ಎಂ. ಇಮಾಮ್ ಸಾಹೇಬರ ನೆನಪಿಗಾಗಿ ಜಗಳೂರಿನ ಜೆ.ಎಂ. ಇಮಾಮ್ ಟ್ರಸ್ಟ್  ಕಳೆದ ನಾಲ್ಕು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ರಾಜ್ಯಮಟ್ಟದ ಇಮಾಮ್ ಸ್ಮಾರಕ  ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ. 

2023 ನೇ ಸಾಲಿನ `ಜೆ.ಎಂ. ಇಮಾಮ್‌ ಸ್ಮಾರಕ ಪ್ರಶಸ್ತಿಗೆ’ ನಿವೃತ್ತ ನ್ಯಾಯಾಧೀಶರು, ಮಾಜಿ ಲೋಕಾಯುಕ್ತರೂ ಆದ ಎನ್. ಸಂತೋಷ್ ಹೆಗಡೆ ಯವರು ಭಾಜನರಾಗಿದ್ದಾರೆ. 

ಜಗಳೂರು ಇಮಾಮ್ ಶಾಲಾ ಆವರಣದಲ್ಲಿ ನಾಳೆ ದಿನಾಂಕ 27ರ ಬುಧವಾರ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಲಿದೆ.

ಸಮಾರಂಭದ ಉದ್ಘಾಟನೆ: ಡಾ. ಎನ್. ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು, ಮೈಸೂರು, ಪ್ರಶಸ್ತಿ ಪುರಸ್ಕೃತರು ಸನ್ಮಾನ್ಯ ಎನ್. ಸಂತೋಷ್ ಹೆಗಡೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ಮಾಜಿ ಲೋಕಾಯುಕ್ತರು.

ಮುಖ್ಯ ಅತಿಥಿಗಳು : ಬಿ ದೇವೇಂದ್ರಪ್ಪ ಶಾಸಕರು, ಜಲೀಲ್ ಸಾಬ್ ರಾಜ್ಯಾಧ್ಯಕ್ಷರು ಪಿಂಜಾರ್ ಸಂಘ, ಹಾಲ ಮೂರ್ತಿ, ಬಿಇಓ.  ಅಧ್ಯಕ್ಷತೆ : ಹಾಜಿ ಜೆ.ಕೆ. ಹುಸೇನ್ ಮಿಯಾಸಾಬ್.  ಮೌರ್ಯ ಶೌರ್ಯ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳು: ಮಹಿಮಾ ಮಾನಸಿ, ಪಾಲ್ಗುಣಿ ಹೆಗ್ಗಣ. ಪ್ರಶಸ್ತಿ ಪ್ರದಾನ ಸಮಾರಂಭ : ಸಂಜೆ 4:30 ಗಂಟೆಗೆ.

error: Content is protected !!