ಬರ್ಮಿಂಗ್‌ಹ್ಯಾಮ್, ಡಿ. 26 – ಹಟ್ಟು ಹಾಗೂ ಸಾವು ಒಂದೇ ನಾಣ್ಯದ ಎರಡು ಮುಖಗಳು. ಸಾವು ನಮ್ಮ ಜೈವಿಕತೆಯ ಸಹಜ ಭಾಗವೇ ಆಗಿದೆ. ಮನುಷ್ಯರ ಗರಿಷ್ಠ ಜೀವಿತಾವಧಿ ಕೇವಲ 120 ವರ್ಷಕ್ಕಿಂತ ತುಸು ಹೆಚ್ಚಿದೆ. ಎಲ್ಲ ಪ್ರಾಣಿಗಳಿಗೂ ವಯಸ್ಸಾಗುತ್ತದೆಯಾದರೂ, ವಯಸ್ಸಾಗುವ ವೇಗ ಒಂದೇ ಅಲ್ಲ. ಮನುಷ್ಯ ವರ್ಷಗಳು ಕಳೆದಂತೆ ವೃದ್ಧನಾಗುತ್ತಾನೆ. ಕೆಲ ಪ್ರಾಣಿಗಳು ಹಾಗಲ್ಲ, ಅವುಗಳಿಗೆ ವಯಸ್ಸಾಗುವುದೇ ಇಲ್ಲ!
ಮನುಷ್ಯರಿಗೆ 30 ದಾಟಿದ ನಂತರ ಮುಪ್ಪು ಆವರಿಸಲು ಆರಂಭಿಸುತ್ತದೆ. ಪ್ರತಿ ಎಂಟು ವರ್ಷಗಳಿಗೊಮ್ಮೆ ಸಾವಿನ ಸಾಧ್ಯತೆ ದುಪ್ಪಟ್ಟಾಗುತ್ತಾ ಹೋಗುತ್ತದೆ. ಒಂದೊಮ್ಮೆ ಶತಾಯುಷಿಗಳಾಗುವ ಭಾಗ್ಯ ಲಭಿಸಿದರೂ, ನಂತರ ಪ್ರತಿ ವರ್ಷ ಭೂಮಿಗೆ ವಿದಾಯ ಹೇಳುವ ಸಾಧ್ಯತೆ ಹೆಚ್ಚಾಗಿಯೇ ಇರುತ್ತದೆ.
ಮನುಷ್ಯ ಡೈನೋಸಾರ್‌ಗಳ ಕಾಲದಲ್ಲಿ ಹುಟ್ಟಿದ್ದೇ ವೃದ್ಧಾಪ್ಯದ ಸಮಸ್ಯೆಗೆ ಕಾರಣ ಎಂದು ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದ ಜಾವೋ ಪೆಡ್ರೊ ಡಿ ಮಗಲ್ಹೇಸ್ ಪ್ರತಿಪಾದಿಸುತ್ತಾರೆ.
ಇತರೆ ಸಸ್ತನಿಗಳಿಗೆ ಹೋಲಿಸಿದರೆ ಮನುಷ್ಯ ಹೆಚ್ಚು ಕಾಲ ಬದುಕುತ್ತಾನೆ. ಅದರಲ್ಲೂ ನೆಲದ ಮೇಲೆ ಬದುಕುವ ಸಸ್ತನಿಗಳಲ್ಲಿ ಮನುಷ್ಯರೇ ದೀರ್ಘಾಯುಷಿಗಳು. ತಿಮಿಂಗಿಲಗಳು ಮಾತ್ರ ಆಯುಷ್ಯದಲ್ಲಿ ಮನುಷ್ಯರನ್ನು ಹಿಂದೆ ಹಾಕಿರುವ ಲೆಕ್ಕಾಚಾರವಿದೆ. ಆದರೆ, ಸರಿಸೃಪಗಳು, ಉಭಯ ಚರಗಳು ಹಾಗೂ ಮೀನುಗಳಲ್ಲಿ ವೃದ್ಧಾಪ್ಯದ ಸಂಕೇತಗಳು ಕಂಡು ಬರುವುದಿಲ್ಲ. ಆಮೆ, ಸಾಲಮಂಡರ್ ಮೀನು ಹಾಗೂ ರಾಕ್‌ಫಿಶ್ ಗಳಲ್ಲಿ ವೃದ್ಧಾಪ್ಯ ರಹಿತ ಜೀವನ ಕಾಣಬಹುದು.
ಹಲವಾರು ಸರಿಸೃಪ ಹಾಗೂ ಉಭಯಚರಗಳಲ್ಲಿ ವೃದ್ಧಾಪ್ಯ ಇಲ್ಲವೇ ವಯೋಸಂಬಂಧದ ಸಾವು ಕಂಡು ಬರುವುದಿಲ್ಲ ಎಂದು 2022ರಲ್ಲಿ ಸೈನ್ಸ್ ನಿಯತಕಾಲಿಕದಲ್ಲಿ ನಡೆಸಲಾದ ಅಧ್ಯಯನ ತಿಳಿಸಿತ್ತು.
ವೃದ್ಧಾಪ್ಯ ರಹಿತ ಜೀವನ : ವೃದ್ಧಾಪ್ಯ ರಹಿತ ಎನ್ನಲಾಗುವ ಈ ಜೀವಿಗಳನ್ನು ಸುದೀರ್ಘ ಕಾಲ ಅಧ್ಯಯನ ಮಾಡಿದಲ್ಲಿ, ಅವುಗಳಲ್ಲೂ ವೃದ್ಧಾಪ್ಯ ಕಂಡು ಬರಬಹುದೇ? ಅಂತಹ ಅದೃಷ್ಟ ಸಿಗುವುದು ಕಷ್ಟ. ಎಂದರೆ, ಗ್ರೀನ್‌ಲ್ಯಾಂಡ್ ಶಾರ್ಕ್ ರೀತಿಯ ಪ್ರಾಣಿಗಳು ಸುಮಾರು 400 ವರ್ಷ ಬದುಕುತ್ತವೆ. ಹೀಗಾಗಿ ಅವುಗಳ ವೃದ್ಧಾಪ್ಯಕ್ಕೆ ಕಾಯುವುದು ನರಮನುಷ್ಯರಿಂದ ಕಷ್ಟಸಾಧ್ಯ.
ಕೆಲ ವೃದ್ಧಾಪ್ಯ ರಹಿತ ಜೀವಿಗಳು, ತಮ್ಮ ಜೀವಿತಾವಧಿಯ ಉದ್ದಕ್ಕೂ ಬೆಳೆಯುತ್ತವೆ. ಹೀಗಾಗಿ ಈ ರೀತಿಯ ಹೆಣ್ಣು ಪ್ರಾಣಿಗಳು ವಯಸ್ಸಾದಂತೆ ಹೆಚ್ಚು ಮೊಟ್ಟೆ ಇಡುತ್ತವೆ. ಈ ವರ್ತನೆ ಸಸ್ತನಿಗಳಿಗೆ ತದ್ವಿರುದ್ಧವಾಗಿದೆ. ವೃದ್ಧಾಪ್ಯದಿಂದ ಬಹುತೇಕ ಮುಕ್ತವಾಗಿರುವ ಈ ಪ್ರಾಣಿಗಳು ತಮ್ಮ ಬೇಟೆಯಾಡುವ ಪ್ರಾಣಿಗ ಳಿಂದ ಇಲ್ಲವೇ ರೋಗಗಳಿಂದ ಸಾವನ್ನಪ್ಪುತ್ತವೆ.
ಡೈನೋಸಾರ್ ಕಾಟ : ಉಭಯಚರಗಳು 370 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿದ್ದವು. 320 ದಶಲಕ್ಷ ವರ್ಷಗಳ ನಂತರ ಸರಿಸೃಪಗಳು ಹುಟ್ಟಿಕೊಂಡವು. ನಂತರ ಸರಿಸೃಪಗಳಿಂದ ಸಸ್ತನಿಗಳು ಹುಟ್ಟಿಕೊಂಡವು. ಈ ಜೀವ ವಿಕಾಸದ ಸುದೀರ್ಘ ಯಾನದಲ್ಲಿ ಸಸ್ತನಿ ಕುಟುಂಬಕ್ಕೆ ಸೇರಿದ ಮನುಷ್ಯ ಹುಟ್ಟಿಕೊಂಡಿದ್ದು ಇತ್ತೀಚೆಗೆ.
ಸುಮಾರು 200 ದಶಲಕ್ಷ ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಫೋಟದಿಂದ ಶೇ.76ರಷ್ಟು ಜೀವಿಗಳು ನಾಶವಾದವು. ನಂತರ ಡೈನೋಸಾರ್‌ಗಳು ನೆಲದ ತುಂಬಾ ಆವರಿಸಿಕೊಂಡವು. ಈ ಡೈನೋಸಾರ್‌ಗಳ ಬೇಟೆಯಿಂದ ತಪ್ಪಿಸಿಕೊಳ್ಳಲು ಸಸ್ತನಿಗಳು ಚಿಕ್ಕವಾಗುತ್ತಾ ಸಾಗಿದವು. ಅಂತೆಯೇ ರಾತ್ರಿ ಬದುಕುವುದನ್ನು ಕಲಿತವು ಮತ್ತು ಜೀವಿತಾವಧಿಯೂ ಕಡಿಮೆಯಾಯಿತು.
ಚಿಕ್ಕ ಜೀವನ, ಹೆಚ್ಚು ಮರಿ : ಡೈನೋಸಾರ್‌ಗಳ ಹಾವಳಿಯಿಂದ ಸುದೀರ್ಘ ಕಾಲ ಬದುಕುವ ಅವಕಾಶವಿಲ್ಲದ ಈ ಜೀವಿಗಳು, ಬದುಕಿರುವ ಅಲ್ಪ ಕಾಲದಲ್ಲೇ ತ್ವರಿತವಾಗಿ ಮರಿಗಳಿಗೆ ಜನ್ಮ ನೀಡುವುದನ್ನು ಕಲಿತವು. ಇರುವ ಸಂಕ್ಷಿಪ್ತ ಜೀವನದಲ್ಲೇ ಹೆಚ್ಚು ಮರಿಗಳನ್ನು ಹುಟ್ಟು ಹಾಕಿ ತಮ್ಮ ಸಂತತಿ ಉಳಿಸಿಕೊಂಡವು. ಸಂಕ್ಷಿಪ್ತ ಜೀವನ, ಹೆಚ್ಚು ಮರಿಗಳ ಉತ್ಪತ್ತಿ ಮಾಡುವ ಪ್ರವೃತ್ತಿ ಅವುಗಳ ರಕ್ತಗತ ಗುಣವಾಯಿತು.
ದೇಹದ ವ್ಯವಸ್ಥೆಗೆ ಧಕ್ಕೆಯಾದಾಗ ಅದನ್ನು ಸರಿಪಡಿಸುವ ವ್ಯವಸ್ಥೆ ಸುದೀರ್ಘ ಕಾಲ ಬದುಕುವ ಪ್ರಾಣಿಗಳಲ್ಲಿ ಇರುತ್ತದೆ. ಸಸ್ತನಿಗಳು ಇಂತಹ ವ್ಯವಸ್ಥೆಯನ್ನೇ ಕಳೆದುಕೊಂಡವು.
ಕಳೆದು ಹೋದ ದೀರ್ಘಾಯುಷ್ಯ : ಸುಮಾರು 66 ದಶಲಕ್ಷ ವರ್ಷಗಳ ಹಿಂದೆ ಕ್ಷುದ್ರ ಗ್ರಹವೊಂದು ಭೂಮಿಗೆ ಬಡಿದು ಡೈನೋಸಾರ್‌ಗಳು ಸಾವನ್ನಪ್ಪಿದವು. ನಂತರ ಜೀವಿತಾವಧಿಯಲ್ಲಿ ವೈವಿಧ್ಯತೆ ಹೊಂದಿರುವ ಜೀವಿಗಳು ಹುಟ್ಟಿಕೊಂಡವು. ಆ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆದಿ ಮಾನವರು ಬೇರೆ ಸಸ್ತನಿಗಳಿಗಿಂತ ಹೆಚ್ಚು ಕಾಲ ಬದಕುವ ಸಾಮರ್ಥ್ಯ ಪಡೆದುಕೊಂಡರು. ಆದರೆ, ಡೈನೋ ಸಾರ್ ಕಾಲದಲ್ಲಿ ಉಂಟಾದ ಪರಿಣಾಮಗಳು ಸಂಪೂರ್ಣ ನಿವಾರಣೆಯಾಗಲಿಲ್ಲ. ನೂರಾರು ವರ್ಷಗಳ ಕಾಲ ಬದುಕಲು ಅಗತ್ಯವಾದ ಅಂಗರಚನೆ ಪಡೆದುಕೊಳ್ಳಲು ಆಗಲಿಲ್ಲ.
ಡೈನೋಸಾರ್‌ಗಳ ಪ್ರಭಾವಕ್ಕೆ ಸಿಲುಕದ ಸಸ್ತನಿಗಳ ಅಧ್ಯಯನ ಮಾಡಿದಾಗ, ಅವುಗಳ ಜೀವನಚಕ್ರ ಬೇರೆಯದೇ ಆಗಿರುವುದು ಕಂಡು ಬರುತ್ತದೆ. ನ್ಯೂಜಿಲ್ಯಾಂಡ್‌ನಲ್ಲಿ ಟುವಾಟರ ಎಂಬ ಹಲ್ಲಿ ಹೋಲುವ ಪ್ರಾಣಿ ಕಂಡು ಬರುತ್ತದೆ. ಆದರೆ, ಇದು 250 ದಶಲಕ್ಷ ವರ್ಷಗಳ ಹಿಂದೆ ಹಾವು ಹಾಗೂ ಹಲ್ಲಿಗಳಿಂದ ಭಿನ್ನವಾಗಿ ರೂಪುಗೊಂಡ ಪ್ರಾಣಿ. ನಿಧಾನದ ಗತಿಯ ಜೀವವಿಕಾಸ ಹೊಂದಿರುವ ಇದನ್ನು `ಸಜೀವ ಪಳಿಯುಳಿಕೆ’ ಎಂದೂ ಪರಿಗಣಿಸಲಾ ಗುತ್ತದೆ. ಟುವಾಟರಗಳು 100 ವರ್ಷಕ್ಕೂ ಹೆಚ್ಚು ಕಾಲ ಬದುಕುತ್ತವೆ. ಮನುಷ್ಯರಿಗಿಂತ ನಿಧಾನವಾಗಿ ವೃದ್ಧಾಪ್ಯ ಕಾಣುತ್ತವೆ. ಹೀಗಾಗಿ, ಮನುಷ್ಯರ ಜೀವಿತಾವಧಿಗೆ ಡೈನೋಸಾರ್ ಗಳಿಂದ ಕತ್ತರಿ ಬಿತ್ತು ಎಂದು ಹೇಳಬಹುದು.
ಹಟ್ಟು ಹಾಗೂ ಸಾವು ಒಂದೇ ನಾಣ್ಯದ ಎರಡು ಮುಖಗಳು. ಸಾವು ನಮ್ಮ ಜೈವಿಕತೆಯ ಸಹಜ ಭಾಗವೇ ಆಗಿದೆ. ಮನುಷ್ಯರ ಗರಿಷ್ಠ ಜೀವಿತಾವಧಿ ಕೇವಲ 120 ವರ್ಷಕ್ಕಿಂತ ತುಸು ಹೆಚ್ಚಿದೆ. ಎಲ್ಲ ಪ್ರಾಣಿಗಳಿಗೂ ವಯಸ್ಸಾಗುತ್ತದೆಯಾದರೂ, ವಯಸ್ಸಾಗುವ ವೇಗ ಒಂದೇ ಅಲ್ಲ. ಮನುಷ್ಯ ವರ್ಷಗಳು ಕಳೆದಂತೆ ವೃದ್ಧನಾಗುತ್ತಾನೆ. ಕೆಲ ಪ್ರಾಣಿಗಳು ಹಾಗಲ್ಲ, ಅವುಗಳಿಗೆ ವಯಸ್ಸಾಗುವುದೇ ಇಲ್ಲ!