ಹರಿಹರ, ಡಿ.26- ತಾಲ್ಲೂಕಿನ ಭಾನುವಳ್ಳಿ ಮತ್ತು ಕಡ್ಲೆಗೊಂದಿ ಗ್ರಾಮದಲ್ಲಿ ಮಾದಿಗ ಹಾಗೂ ಹಿಂದುಳಿದ ಜನಾಂಗದವರಿಗೆ ವಸತಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ, ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ನೇತೃತ್ವದಲ್ಲಿ ನಿರ್ವಸತಿಕರು ನಗರದ ತಾಲ್ಲೂಕು ಕಚೇರಿ ಎದುರು ಮಂಗಳವಾರ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಇಲ್ಲಿನ ಪಕ್ಕೀರಸ್ವಾಮಿ ಮಠದಿಂದ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಿದರು. ನಂತರ ನಡೆದ ಸಭೆಯಲ್ಲಿ ದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಭಾನುವಳ್ಳಿ ಗ್ರಾಮದ ಚೌಡಪ್ಪ ಸಿ., ಹಳದಪ್ಪ ಗುಣಾರಿ, ಲಕ್ಷ್ಮಪ್ಪ ವಿ.ಎನ್., ಸುಶೀಲಮ್ಮ ತೆಲಗಿ, ಹನುಮಕ್ಕ ಮಾಗೋಡು, ಧೂಳೆಹೊಳೆ ಮಲ್ಲಮ್ಮ, ನೇತ್ರಮ್ಮ, ಶ್ಯಾಮಕ್ಕ, ಶೇಖರಮ್ಮ, ಕಡ್ಲೆಗೊಂದಿ ಗ್ರಾಮದ ಗ್ರಾಪಂ ಸದಸ್ಯ ತಿಮ್ಮಣ್ಣ, ಹನುಮಂತಪ್ಪ ಕೆ.ಎಲ್., ತಿಮ್ಮಪ್ಪ, ರಂಗಪ್ಪ, ಪರಮೇಶ್, ಬಸವರಾಜ್, ಕೆ.ಆರ್.ಉಮೇಶ್, ರೇಣುಕಮ್ಮ, ಸೀತಮ್ಮ, ಮಲ್ಲಮ್ಮ, ಮೈಲಮ್ಮ ಹಾಗೂ ಇತರರಿದ್ದರು.