ಪ್ರಯತ್ನ ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಬದಲಾವಣೆ-ಡಾ. ಎ.ಬಿ. ರಾಮಚಂದ್ರಪ್ಪ ಅಭಿಮತ

ಪ್ರಯತ್ನ ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಬದಲಾವಣೆ-ಡಾ. ಎ.ಬಿ. ರಾಮಚಂದ್ರಪ್ಪ ಅಭಿಮತ

ಮಲೇಬೆನ್ನೂರು, ಡಿ. 21 – ಪ್ರಯತ್ನ ಪರಿಶ್ರಮದಿಂದ ಮಾತ್ರ ಬದುಕಿನಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಮಾನವ ಬಂಧುತ್ವ ವೇದಕೆಯ ರಾಜ್ಯ ಸಂಚಾಲಕ ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು. 

ಅವರು ಗುರುವಾರ ಸಂಜೆ ಹನಗವಾಡಿ ಸಮೀಪ ಇರುವ ಪ್ರೋ. ಬಿ. ಕೃಷ್ಣಪ್ಪ ಭವನದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಷನ್ ವತಿ ಯಿಂದ ಕಳೆದ 10 ದಿನಗಳಿಂದ ನಡೆಸಿದ ಸೈನಿಕ ಹಾಗೂ ಪೊಲೀಸ್ ತರಬೇತಿಯ ಸಮಾರೂಪ ಸಮಾರಂಭದಲ್ಲಿ ಮಾತನಾಡಿದರು. 

ಇಲ್ಲಿ ತರಬೇತಿ ಪಡೆದಿರುವ ನೀವು ಮುದೊಂದು ದಿನ ನೌಕರಿಗೆ ಸೇರಿದ ನಂತರ ಬಡವರಿಗೆ, ಶೋಷಿತರಿಗೆ, ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡುವ ಕೆಲಸ ಮಾಡುವ ಮೂಲಕ ಸಮಾಜ ಪರಿವರ್ತನೆಗೆ ಮುಂದಾಗಬೆಕೇಂದು ಯುವಕರಿಗೆ ತಿಳಿಸಿದರು. 

ಮಾನವ ಬಂಧುತ್ವ ವೇದಿಕೆಯ ಇನ್ನೋರ್ವ ಸಂಚಾಲಕ ರವೀಂದ್ರ ನಾಯ್ಕರ್ ಮಾತನಾಡಿ, ಶಿಕ್ಷಣ ಅಪೂರ್ಣವಾಗಿರುವ ಇಂತಹ ಯುವಕರಿಗೆ ಉದ್ಯೋಗ ಕೊಡಿಸುವ ಉದ್ದೇಶದಿಂದ ಸತೀಶ್ ಜಾರಕಿಹೊಳಿ ಅವರು ಇದುವರಿಗೆ ಸಾವಿರಾರು ಯುವಕರಿಗೆ ಸೈನಿಕ ಮತ್ತು ಪೊಲೀಸ್ ತರಬೇತಿಗಳನ್ನು ಕೊಡಿಸಿದ್ದಾರೆ. ಅಲ್ಲದೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಸೇರಿದಂತೆ ಇನ್ನೂ ಅನೇಕ ತರಬೇತಿ ಕೊಡಿಸುತ್ತಿದ್ದಾರೆ ಎಂದರು.

ಯುವಕರಿಗೆ ತರಬೇತಿ ನೀಡಿದ ಪ್ರದೀಪ್ ಮಾಲ್ಗುಡಿ, ಹನುಮಂತ ನಂದಿ, ಸಂತೋಷ್, ಜಭೀವುಲ್ಲಾ ಮಾತನಾಡಿದರು.

ತರಬೇತಿ ಪಡೆದ ರಾಯಚೂರಿನ ರಂಗಮೂರ್ತಿ, ದಾವಣಗೆರೆಯ ಸತೀಶ್, ಕೆಎನ್ ಹಳ್ಳಿಯ ಜಭೀವುಲ್ಲಾ ಸುಭಾಷ್, ಸಂತೆಬೆನ್ನೂರಿನ ಸಾಗರ್, ಉಕ್ಕಡ ಗಾತ್ರಿಯ ಅಜೇಯ್, ಬಸವರಾಜ್ ಅವರುಗಳು ತಮ್ಮ ಅನುಭವ ಹಂಚಿಕೊಂಡರು.

ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ ಪಿಎಸಿಎಸ್ ಮಾಜಿ ಅಧ್ಯಕ್ಷ ಕೆ.ಪಿ. ಗಂಗಾಧರ್, ಜನತಾ ಬಜಾರ್ ನಿರ್ದೇಶಕ, ಪಿ.ಹೆಚ್. ಶಿವಕುಮಾರ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕುಂಬಳೂರು ವಾಸು, ಉಕ್ಕಡಗಾತ್ರಿಯ ಮಂಜು ದೊಡ್ಮನಿ, ಕಲಾವಿದ ಬಾನಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!