ಹರಿಹರದಲ್ಲಿ ಹೊನಲು-ಬೆಳಕಿನ ಕುಸ್ತಿ ಪಂದಾವಳಿ ಆರಂಭ

ಹರಿಹರದಲ್ಲಿ ಹೊನಲು-ಬೆಳಕಿನ ಕುಸ್ತಿ ಪಂದಾವಳಿ ಆರಂಭ

ಹರಿಹರ, ಡಿ. 21- ಮನುಷ್ಯ ಸದೃಢ ಮತ್ತು ಆರೋಗ್ಯವಂತ ಜೀವನ ನಡೆಸಬೇಕಾದರೆ ಕುಸ್ತಿ, ಯೋಗ, ಕಬಡ್ಡಿ, ಖೋಖೋ, ಫುಟ್ಬಾಲ್, ವ್ಯಾಯಾಮ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಆರೋಗ್ಯವಂತ ಜೀವನ ನಡೆಸುವುದರ ಜೊತೆಗೆ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೊಂದಬಹುದು ಎಂದು ಕಾಗಿನಲೆ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಗಾಂಧಿ ಮೈದಾನದಲ್ಲಿ ಏರ್ಪಾಡಾಗಿದ್ದ ಶ್ರೀ ಕನಕದಾಸರ 536 ನೇ ಜಯಂತ್ಯೋತ್ಸವದ ಅಂಗವಾಗಿ ಶ್ರೀ ಹರಿಹರ ಕುಸ್ತಿ ಜೀರ್ಣೋದ್ಧಾರ ಸಮಿತಿ ಮತ್ತು ಕರ್ನಾಟಕ ರಾಜ್ಯ ಕುಸ್ತಿ ಸಂಘದ ವತಿಯಿಂದ ಇಂದು ಆರಂಭಗೊಂಡ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಹಾಗೂ ರಾಷ್ಟ್ರಮಟ್ಟಕ್ಕೆ ಕರ್ನಾಟಕ ತಂಡದ ಆಯ್ಕೆ ಪಕ್ರಿಯೆಗೆ  ಚಾಲನೆ ನೀಡಿ, ಅವರು ಮಾತನಾಡಿದರು. 

ಜೀವನದಲ್ಲಿ ಮನುಷ್ಯ ಎಷ್ಟೆಲ್ಲಾ ಆಸ್ತಿ, ಹಣ, ಅಂತಸ್ತು, ಐಶ್ವರ್ಯ ಗಳಿಸಿದರೂ, ಅತ್ಯವಶ್ಯಕವಾಗಿ ಬೇಕಾಗಿರುವುದು ಆರೋಗ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಅನೇಕ ಉನ್ನತ ನೌಕರಿಗಳನ್ನು ಪಡೆಯಲು ಸಹಕಾರಿ ಯಾಗುತ್ತದೆ ಎಂದು ಅವರು ಹೇಳಿದರು.

ಕುಸ್ತಿ ಸಮಿತಿಯ ಗೌರವ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್‌ರವರ ನೇತೃತ್ವದಲ್ಲಿ ನಗರದಲ್ಲಿ ಕುಸ್ತಿ ಕ್ರೀಡಾ ಕೂಟವನ್ನು ನಡೆಸುವುದರ ಜೊತೆಗೆ ರಾಷ್ಟ್ರ ಮಟ್ಟಕ್ಕೆ ಕರ್ನಾಟಕ ತಂಡದ ಆಯ್ಕೆಯನ್ನು ಮಾಡಿ ಕಳಿಸುವಂತಹ ಮಹತ್ತರವಾದ ಕೆಲಸವನ್ನು ಮಾಡಿದ್ದರ ಫಲವಾಗಿ ಕಳೆದ ಬಾರಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಎಂಟು ಕುಸ್ತಿ ಪಟುಗಳಿಗೆ ಸರ್ಕಾರಿ ನೌಕರಿ ಭಾಗ್ಯ ಲಭಿಸಿರುವುದು ಶ್ಲ್ಯಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಕುಸ್ತಿ ಪಟು ಕೆ. ಜಡಿಯಪ್ಪ, ಎಂ.ಹೆಚ್.ಬಿ. ಚಂದ್ರಶೇಖರ್, ಕುಸ್ತಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್, ಅಧ್ಯಕ್ಷ ರೇವಣಪ್ಪ ದ್ಯಾವನಾಯ್ಕರ್, ಕಾರ್ಯಾಧ್ಯಕ್ಷ ಸುರೇಶ್ ಚಂದಾಪೂರ್, ಕಾರ್ಯದರ್ಶಿ ಚೂರಿ ಜಗದೀಶ್, ಖಜಾಂಚಿ, ಅಣ್ಣಪ್ಪ ಶಾವಿ, ಸಂಘಟನಾ ಕಾರ್ಯದರ್ಶಿ ಪಾಲಾಕ್ಷಪ್ಪ, ಶಿವಾನಂದ, ಮಾರುತಿ, ವಿಜಯಕುಮಾರ್ ರಟ್ಟಿಹಳ್ಳಿ, ಬೀರೇಶ್, ರಾಘು ಚೌಗಲೆ, ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್,  ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರನಹಳ್ಳಿ ಮಂಜುನಾಥ್ ಪಾಟೀಲ್, ಕೆ.ಪಿ. ಗಂಗಾಧರ್, ಕಾಮಲಪುರ ಮಲ್ಲೇಶ್, ಶಿಕ್ಷಕ ಬೀರೇಶ್, ಶಿವಕುಮಾರ್, ಅಭಿದಾಲಿ, ಜಿಗಳಿ ಆನಂದಪ್ಪ, ವಾಸು ಕುಂಬಳೂರು, ಶಿವಕುಮಾರ್ ಮಲೆಬೆನ್ನೂರು, ಪತ್ರಕರ್ತರಾದ ಎಂ. ಚಿದಾನಂದ ಕಂಚಿಕೇರಿ, ಜಿಗಳಿ ಪ್ರಕಾಶ್, ಸಂತೋಷ್‌ ನೋಟದರ್, ಮಂಜುನಾಥ್, ರವಿಕುಮಾರ್, ಪ್ರಕಾಶ್ ಆರ್.ಪಿ, ವೆಂಕಟೇಶ ಶೆಟ್ಟಿ, ನಾರಾಯಣ್, ದುಗ್ಗಪ್ಪ, ಆಸೀಫ್ ಹಾಲಿ, ಇದಾಯತ್ ಪತುಲಿ,  ತಿಪ್ಪೇಸ್ವಾಮಿ, ಹನುಮಂತಪ್ಪ ಇತರರು ಹಾಜರಿದ್ದರು. 

error: Content is protected !!