ವೀರಶೈವ-ಲಿಂಗಾಯತ ಅಧಿವೇಶನದ ಯಶಸ್ಸಿಗೆ ಜಗಳೂರು ಸಮಾಜದ ಕರೆ

ವೀರಶೈವ-ಲಿಂಗಾಯತ ಅಧಿವೇಶನದ ಯಶಸ್ಸಿಗೆ ಜಗಳೂರು ಸಮಾಜದ ಕರೆ

ಜಗಳೂರು, ಡಿ.20- ಇದೇ ದಿನಾಂಕ 23, 24 ರಂದು ದಾವಣಗೆರೆಯಲ್ಲಿ  ನಡೆಯಲಿರುವ ಅಖಿಲ ಭಾರತ ವೀರಶೈವ- ಲಿಂಗಾಯತ 24 ನೇ ಮಹಾ ಅಧಿವೇಶನಕ್ಕೆ ತಾಲ್ಲೂಕಿನ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಮಹಾ ಅಧಿವೇಶನ ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಜೆ.ಎನ್.ಶಿವನಗೌಡ್ರು ಮನವಿ ಮಾಡಿದರು.

ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ದಿನಾಂಕ 23 ರಂದು ಗ್ರಾಮ ಪಂಚಾಯಿತಿಗೆ ಒಂದು ಬಸ್‍ನಂತೆ ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ 22 ಬಸ್‍ಗಳು, ಪಟ್ಟಣಕ್ಕೆ ಎರಡರಿಂದ ಮೂರು ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ. 24 ರಂದು ನಡೆಯುವ ಮಹಾ ಅಧಿವೇಶನ ಸಭೆಗೆ ತಮ್ಮ ವಾಹನಗಳ ಮೂಲಕ ಬರಲಿದ್ದಾರೆ ಎಂದವರು ತಿಳಿಸಿದರು.

ಮಹಾಸಭಾದ ಮುಖಂಡ ವೈ.ಎನ್.ಮಂಜುನಾಥ್ ಮತ್ತು ಮಾಜಿ ಅಧ್ಯಕ್ಷ ಎಂ.ಎಸ್.ಪಾಟೀಲ್ ಮಾತನಾಡಿ, ಈ ಅಧಿವೇಶನವು ವೀರಶೈವ-ಲಿಂಗಾಯತ ಸಮಾಜದವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಓಬಿಸಿ ಅಡಿ ಮೀಸಲಾತಿ ನೀಡುವಂತೆ ಒತ್ತಾಯ ಜೊತೆಗೆ ನಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಶಿವಕುಮಾರ್, ನಗರ ಘಟಕದ ಅಧ್ಯಕ್ಷ ನಾಗರಾಜ, ಮುಖಂಡರುಗಳಾದ ಮೆದಗಿನಕೆರೆ ವೀರೇಂದ್ರ ಪಾಟೀಲ್, ಗೋಡೆ ಪ್ರಕಾಶ್, ಮುಸ್ಟೂರು ಲಿಂಗೇಶ್, ಶಿವಕುಮಾರ್ ಮುಂತಾದವರು ಇದ್ದರು.

error: Content is protected !!