9 ವಿಧದ ಹೂವುಗಳ 2 ಟನ್‌ ರಾಶಿಯೊಂದಿಗೆ ಶೃಂಗಾರಗೊಂಡ ಕೊಟ್ಟೂರೇಶ್ವರ ದೇವಸ್ಥಾನ

9 ವಿಧದ ಹೂವುಗಳ 2 ಟನ್‌ ರಾಶಿಯೊಂದಿಗೆ ಶೃಂಗಾರಗೊಂಡ ಕೊಟ್ಟೂರೇಶ್ವರ ದೇವಸ್ಥಾನ

ಕೊಟ್ಟೂರು, ಡಿ. 18 – ಲಕ್ಷಾಂತರ ಭಕ್ತರ ಆರಾಧ್ಯದೈವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಹಿರೇಮಠವನ್ನು ಕಾರ್ತಿಕೋತ್ಸವದ ಮುನ್ನಾ 13ನೇ ಶ್ರೀ ಸ್ವಾಮಿಯ ಬೆಳ್ಳ ಪಲ್ಲಕ್ಕಿ ಮಹೋತ್ಸವದ ನಿಮಿತ್ತ ಶ್ರೀ ಸ್ವಾಮಿಯ ಪರಮ ಭಕ್ತರಾದ ಪಟ್ಟಣದ ಸಹೋದರ ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಇವರು ಇಡೀ ದೇವಸ್ಥಾನವನ್ನು ವಿವಿಧ ಬಗೆಯ ಹೂವಿನ ಮಾಲೆಗಳೊಂದಿಗೆ ಶೃಂಗರಿಸಿ ಭಕ್ತರನ್ನು ಆಕರ್ಷಿಸುವ ಮೂಲಕ ಶ್ರೀಸ್ವಾಮಿಗೆ ತಮ್ಮ ಸೇವೆಯನ್ನು ಸಲ್ಲಿಸಿದರು.

ಕಳೆದ 7 ವರ್ಷಗಳಿಂದ ಪ್ರತಿ ಕಾರ್ತೀಕ ಮಾಸದಲ್ಲಿ ದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸುವ ಸೇವೆಯನ್ನು ಮುಂದುವರೆಸಿಕೊಂಡು ಬಂದಿರುವ  ಬಣಕಾರ ಕೊಟ್ರೇಶ ಮತ್ತು ಮೂಗಣ್ಣ ಈ ಬಾರಿ 8ನೇ ವರ್ಷದಲ್ಲೂ ಭರ್ಜರಿ ಹೂವುಗಳ ರಾಶಿಯೊಂದಿಗೆ ದೇವಸ್ಥಾನ ವನ್ನು ಶೃಂಗರಿಸುವ ಸೇವೆಗೈದರು.

9 ವಿಧದ ಹೂವುಗಳ 2 ಟನ್‌ ರಾಶಿಯೊಂದಿಗೆ ಶೃಂಗಾರಗೊಂಡ ಕೊಟ್ಟೂರೇಶ್ವರ ದೇವಸ್ಥಾನ - Janathavaniದೇವಸ್ಥಾನವನ್ನು ಹೂವುಗಳಿಂದ ಶೃಂಗರಿಸಲೆಂದೇ ಚಿತ್ರದುರ್ಗದಿಂದ ವಿಶೇಷವಾಗಿ 9 ವಿಧದ ಹೂವುಗಳ 2 ಟನ್‌ ರಾಶಿಯೊಂದಿಗೆ ಶ್ರೀ ಸ್ವಾಮಿ ಮತ್ತು ದೇವಸ್ಥಾನವನ್ನು ಸಂಪೂರ್ಣ ಅಲಂಕರಿ ಸಿದರು. ಈ ಸೇವೆಯನ್ನು ಸಲ್ಲಿಸಲೆಂದೇ ಭಾನುವಾರ ಇಡೀ ರಾತ್ರಿ ದೇವಸ್ಥಾನದ ಬಳಿಯ ಕೋಟೆ ಭಾಗದ ಯುವಕರು, ಭಕ್ತರು, ಮತ್ತಿತರರೊಡಗೂಡಿ ಶೃಂಗರಿ ಸುವ ಕಾರ್ಯ ಕೈಗೊಂಡರು. ಸೋಮ ವಾರದ ಬೆಳಗಿನ ಐದು ಗಂಟೆಯೊಳಗೆ ಹೂಗಳ ಅಲಂಕಾರದೊಂದಿಗೆ ಕೊಟ್ಟೂರೇಶ್ವರ ಸ್ವಾಮಿ ವಿಶೇಷವಾಗಿ ಕಂಗೊಳಿಸಲು ಸಿದ್ದಗೊಂಡಿತು.

ಹೂಗಳಿಂದ ಶೃಂಗಾರಗೊಂಡ ಶ್ರೀ ಸ್ವಾಮಿಯ ದೇವಸ್ಥಾನವನ್ನು ಸೋಮವಾರ ದಿನವಿಡೀ ಭಕ್ತರು ಕಣ್ತುಂಬಿಕೊಂಡು ಶ್ರೀಸ್ವಾಮಿಯ ದರ್ಶನಾಶಿರ್ವಾದ ಪಡೆದುಕೊಂಡರಲ್ಲದೆ ಬಹುತೇಕರು ತಮ್ಮ ಮೊಬೈಲ್ ಕ್ಯಾಮರಗಳಿಂದ ಶೃಂಗಾರಗೊಂಡ ದೇವಸ್ಥಾನವನ್ನು ಸೆರೆ ಹಿಡಿದರು.

ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿ ನಮ್ಮ ಮನೆ ದೇವರಾಗಿದ್ದು ಹರಕೆ ಹೊತ್ತ ಎಲ್ಲಾ ಕಷ್ಟ ಕಾರ್ಪಣ್ಯಗಳು ಕರಗಿ ನಮ್ಮ ಬಯಕೆಗಳನ್ನು ಶ್ರೀಸ್ವಾಮಿ ಈಡೇರಿಸುತ್ತಿದ್ದಾರೆ ಎಂದು ಬಣಕಾರ ಕೊಟ್ರೇಶ್, ಮೂಗಣ್ಣ ಕೊಟ್ಟೂರು ತಿಳಿಸಿದ್ದಾರೆ.

error: Content is protected !!