ಶ್ರದ್ಧಾ-ಭಕ್ತಿಯ ಮರುಳಸಿದ್ದೇಶ್ವರ ಕಾರ್ತಿಕೋತ್ಸವ

ಶ್ರದ್ಧಾ-ಭಕ್ತಿಯ ಮರುಳಸಿದ್ದೇಶ್ವರ ಕಾರ್ತಿಕೋತ್ಸವ

ದಾವಣಗೆರೆ, ಡಿ. 18- ನಗರದ ತರಳಬಾಳು ಬಡಾವಣೆಯ ಶ್ರೀ ಶಿವಕುಮಾರ ಸ್ವಾಮಿ ಮಹಾ ಮಂಟಪದಲ್ಲಿನ ವಿಶ್ವಬಂಧು ಮರುಳಸಿದ್ಧೇಶ್ವರ ಸ್ವಾಮಿ  ಕಾರ್ತಿಕೋತ್ಸವವು ಶ್ರದ್ಧಾ-ಭಕ್ತಿಯಿಂದ ಜರುಗಿತು.

ನಂದಾದೀಪ ಬೆಳಗುವ ಮೂಲಕ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾಗನೂರು ಸಂಗಮೇಶ್ವರ ಗೌಡ್ರು, ಲೋಕಿಕೆರೆ ಕೆಂಚಪ್ಪ, ರಾಮಗೊಂಡನಹಳ್ಳಿ ಹೆಚ್. ದಯಾನಂದ್, ಕಾಶೀಪುರ ಕೆ.ಪಿ. ಸಿದ್ದೇಶ್, ಆನೆಕೊಂಡದ ರೇವಣಸಿದ್ಧಪ್ಪ, ಎ. ಪರಮೇಶ್ವರಪ್ಪ, ಎ.ಕೆ. ಫೌಂಡೇಶನ್ ಸಂಸ್ಥಾಪಕ ಕೊಟ್ರೇಶ್, ಡಿ.ಜಿ. ಸುಭಾಸ್, ಎಲೇಬೇತೂರು ಹೆಚ್ ಬಸವರಾಜಪ್ಪ, ಬೆಳವನೂರು ನಾಗರಾಜಪ್ಪ, ಎಸ್.ಪಿ.ಪೂಜಾರ್, ಬಾಡಾ ದಿನೇಶ್, ಲಿಂಗರಾಜ್ ಮತ್ತಿತರರು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಹೆಚ್. ಮಹೇಶ್ವರಪ್ಪ ದಂಪತಿ ಹಾಗೂ ಕಾರಿಗನೂರು ಅನುಸೂಯಮ್ಮ ಪಟೇಲ್ ಅವರನ್ನು ಸನ್ಮಾನಿಸಲಾಯಿತು. 

error: Content is protected !!