ಮಲೇಬೆನ್ನೂರು, ಡಿ.17- ಸುಕ್ಷೇತ್ರ ಉಕ್ಕಡಗಾತ್ರಿ ಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಕಾರ್ತಿಕೋತ್ಸವ, ಬೆಳ್ಳಿ ರಥೋತ್ಸವದ ಅಂಗವಾಗಿ ಭಾನುವಾರ ಸಂಜೆ ತುಂಗಭದ್ರಾ ನದಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ಮಾಡಲಾಯಿತು. ನಂದಿ ಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಜರುಗಿದ ತುಂಗಭದ್ರಾ ಆರತಿ ಯಲ್ಲಿ ಹರ-ಚರ -ಗುರುಮೂರ್ತಿಗಳು, ಅಪಾರ ಭಕ್ತರು ಭಾಗವಹಿಸಿದ್ದರು.
ಅಜ್ಜಯ್ಯನ ಮೂರ್ತಿಯನ್ನು ನದಿ ದಡದಲ್ಲಿ ಇಟ್ಟು ತುಂಗಾಭದ್ರಾ ಆರತಿ ಮಾಡಿದ್ದು ವಿಶೇಷವಾಗಿತ್ತು. ಗದ್ದಿಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಎಸ್.ಸುರೇಶ್ ಸೇರಿದಂತೆ ಎಲ್ಲಾ ಟ್ರಸ್ಟಿಗಳು, ಗ್ರಾಮಸ್ಥರು ಹಾಜರಿದ್ದು, ಈ ಕಾರ್ಯ ಕ್ರಮ ನಡೆಸಿಕೊಟ್ಟರು. ಸೋಮವಾರ ಬೆಳಿಗ್ಗೆ 4.30ಕ್ಕೆ ಅಜ್ಜಯ್ಯನ ಗದ್ದಿಗೆಗೆ ಮಹಾ ರುದ್ರಾಭಿಷೇಕ, ಬೆಳಿಗ್ಗೆ 10 ಗಂಟೆಗೆ ರಾಜ್ಯಮಟ್ಟದ ಭಜನಾ ಸ್ಪರ್ಧೆಗೆ ಚಾಲನೆ, ನಂತರ 11 ಗಂಟೆಗೆ ಅಜ್ಜಯ್ಯನ ಬೆಳ್ಳಿ ರಥೋತ್ಸವ ನಡೆಯಲಿದೆ. ರಾತ್ರಿ 8 ಗಂಟೆಯಿಂದ ಕಾರ್ತಿಕೋತ್ಸವ ಜರುಗಲಿದೆ.