ನಗರದಲ್ಲಿ ಇಂದು ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ, ಸಾಂಸ್ಕೃತಿಕ ವೈಭವ

ನಗರದಲ್ಲಿ ಇಂದು ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ದೇವಸ್ಥಾನದಲ್ಲಿ ದೀಪೋತ್ಸವ, ಸಾಂಸ್ಕೃತಿಕ ವೈಭವ

ತರಳಬಾಳು ವೃತ್ತದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ 16ನೇ ವರ್ಷದ ಕಾರ್ತಿಕೋತ್ಸವದ ಪ್ರಯುಕ್ತ ಸಹಸ್ರ ದೀಪೋತ್ಸವ ಮತ್ತು ಸಾಂಸ್ಕೃತಿಕ ವೈಭವವನ್ನು ಇಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

12ನೇ ಶತಮಾನದಲ್ಲಿ ಸರ್ವ ಜನಾಂಗದ ಹಿತಕ್ಕಾಗಿ ತಮ್ಮ
ಜೀವನವನ್ನೇ ಮುಡುಪಾಗಿಟ್ಟ ತೆಲುಗುಬಾಳು ಸಿದ್ಧನನ್ನು ಉಜ್ಜಯಿನಿಯ ಸದ್ಧರ್ಮ ಪೀಠದ ಮೇಲೆ ಕುಳ್ಳಿರಿಸಿ `ತರಳಾ, ಬಾಳು’ ಎಂದು ಹರಸಿ ಆಶೀರ್ವದಿಸಿದ ಎಲ್ಲರ ಆರಾಧ್ಯ ದೈವ, ಮಹಾಪುರುಷರಾದ ಶ್ರೀ ವಿಶ್ವಬಂಧು ಮರುಳಸಿದ್ಧರ ಕಾರ್ತಿಕೋತ್ಸವದ ಪ್ರಯುಕ್ತ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. 

ಇಂದು ಸಂಜೆ 6.30 ಕ್ಕೆ ತರಳಬಾಳು ಬಡಾವಣೆಯ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿರುವ ಶ್ರೀ ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ ದೀಪೋತ್ಸವವನ್ನು ಜಗದ್ಗುರುಗಳು ಉದ್ಘಾಟಿಸಿ, ನಂತರ 7 ಗಂಟೆಗೆ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿರುವ ಶ್ರೀ ವಿಶ್ವಬಂಧು ಮರುಳಸಿದ್ಧೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. 

ನಂತರ ಕಲ್ಯಾಣ ಮಂಟಪದಲ್ಲಿ ವಿವಿಧ ಕಲಾ ತಂಡಗತಳಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ನೆರ ವೇರಲಿದ್ದು, ಶ್ರೀಗಳು ಆಶೀರ್ವಚನ ದಯಪಾಲಿಸಲಿದ್ದಾರೆ.

ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಶ್ರೀ ತರಳಬಾಳು ಪ್ರೌಢಶಾಲಾ ಮಕ್ಕಳು ಅನುಭವ ಮಂಟಪ (ದಾವಣಗೆರೆ), ಶ್ರೀ ಮಾಗನೂರು ಬಸಪ್ಪ ಪ್ರೌಢಶಾಲೆ ಮಕ್ಕಳು, ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ, ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಪ್ರೌಢಶಾಲೆ (ಎಲೇಬೆತೂರು), ತುಳಸಿ ಮಹಿಳಾ ಸಂಘ (ಸಿದ್ಧವೀರಪ್ಪ ಬಡಾವಣೆ, ದಾವಣಗೆರೆ) ಇವರುಗಳು ನಡೆಸಿಕೊಡಲಿದ್ದಾರೆ.

error: Content is protected !!