ಶ್ರೀ ಸಾಣೇಹಳ್ಳಿ ಶ್ರೀಗಳ ವಚನ ಸಂಸ್ಕೃತಿ ಅಭಿಯಾನ ಶ್ಲ್ಯಾಘನೀಯ ಕಾರ್ಯ

ಶ್ರೀ ಸಾಣೇಹಳ್ಳಿ ಶ್ರೀಗಳ ವಚನ ಸಂಸ್ಕೃತಿ  ಅಭಿಯಾನ ಶ್ಲ್ಯಾಘನೀಯ ಕಾರ್ಯ

ಮುಂಬೈ, ಆ. 20- ಇಲ್ಲಿನ ಮೈಸೂರು ಅಸೋಸಿಯೇಷನ್‍ನಲ್ಲಿ  `ತುಮಾರೆ ಸಿವಾ ಔರ್ ಕೋಯಿ ನಹೀ’ ವಚನ ಸಂಸ್ಕೃತಿ ಅಭಿಯಾನ ನಡೆಯಿತು.  ಸಾನ್ನಿಧ್ಯವನ್ನು  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ವಹಿಸಿದ್ದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾಟಕಕಾರ ಡಾ. ಮಂಜುನಾಥ ಮಾತನಾಡಿ,  ಬಸವಣ್ಣನವರ ತತ್ವಾದರ್ಶಗಳಿಗೆ ಸಂಬಂಧಿಸಿದ ಹಿಂದಿ ನಾಟಕಗಳನ್ನು ದೇಶದಾದ್ಯಂತ ಪ್ರದರ್ಶಿಸುವ ವ್ಯವಸ್ಥೆಯನ್ನು  ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾಡಿದ್ದರು.   

ಈ ವರ್ಷ ಬಸವಣ್ಣನವರ ಕನ್ನಡ ವಚನಗಳನ್ನು ಹಿಂದಿಗೆ ಅನುವಾದಿಸಿ, ಹಾಡಿಸಿ ಅದಕ್ಕೆ ನೃತ್ಯ ಸಂಯೋಜನೆ ಮಾಡಿಸಿ, ದೇಶದಾದ್ಯಂತ ಪ್ರದರ್ಶಿಸುವ ವಚನ ಸಂಸ್ಕೃತಿ ಅಭಿಯಾನ  ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದುದು ಎಂದರು. 

ವೇದಿಕೆಯಲ್ಲಿ ಎನ್.ಕೆ.ಇ.ಎಸ್ ನ ಅಧ್ಯಕ್ಷ  ಪಾರ್ಥಸಾರಥಿ ನಾಯಕ ಉಪಸ್ಥಿತರಿದ್ದರು. 

ಜೋಷಿ ಕಾರ್ಯಕ್ರಮ ನಿರೂಪಿಸಿದರೆ ನವಲೇಕರ್ ವಂದನೆ ಸಲ್ಲಿಸಿದರು. ವಚನಗಳನ್ನು ಹಿಂದಿಯಲ್ಲಿ ಗಾಯನ ಮಾಡಿದ ಮುಂಬೈನ ರಾಧಿಕಾ ನಾಂದೆ, ಶಿವಮೊಗ್ಗದ ನಿಶಾಂತ್ ವೆಂಕಟೇಶ್ ಹಾಗೂ ಮುಂಬಯಿನಲ್ಲಿ ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದ ಸಂಘಟಕರಿಗೆ ಶ್ರೀಗಳು ಅಭಿನಂದಿಸಿದರು.

error: Content is protected !!