ಏಕರೂಪ ನಾಗರಿಕ ಸಂಹಿತೆ ಅತ್ಯವಶ್ಯ

ಏಕರೂಪ ನಾಗರಿಕ ಸಂಹಿತೆ ಅತ್ಯವಶ್ಯ

ರಾಣೇಬೆನ್ನೂರಿನ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ

ರಾಣೇಬೆನ್ನೂರು, ಆ. 20- ಸ್ವಾತಂತ್ರ್ಯ ಬಂದು 76 ವರ್ಷ ಗತಿಸಿದರೂ ಏಕರೂಪ ನಾಗರಿಕ ಸಂಹಿತೆ ಬೇಕೇ, ಬೇಡವೇ ಎಂಬ ಚರ್ಚೆಯಲ್ಲಿಯೇ ಇದ್ದೇವೆಯೋ ಹೊರತು ಏಕರೂಪ ನಾಗರಿಕ ಸಂಹಿತೆ ಬೇಕೇ  ಬೇಕು ಎಂಬ ಕೂಗು ಒಕ್ಕೊರಲಿನಿಂದ ಬರಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಹೇಳಿದರು.

ಅವರು ಕರ್ನಾಟಕ ಸಂಘದಲ್ಲಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ, ದೇಶದ ವಿಭಜನೆಯನ್ನು ಧರ್ಮದ ಆಧಾರದಲ್ಲಿ ಮಾಡಿದ ನಂತರ ಭಾರತದಲ್ಲಿ ಮಾತ್ರ ವಿವಿಧ ಧರ್ಮಗಳ ಆಧಾರದಲ್ಲಿ ಒಂದೊಂದು ಕಾನೂನುಗಳನ್ನು ರಚಿಸಲಾಗಿದೆ. ಇದು ಏಕೆ ಎಂದು ಯಾರೂ ಪ್ರಶ್ನಿಸುತ್ತಿಲ್ಲ. ಒಂದು ದೇಶ ಒಂದು ಕಾನೂನು ಪ್ರಪಂಚದ ಎಲ್ಲ ರಾಷ್ಟ್ರಗಳಲ್ಲಿದೆ. ಆದರೆ ಭಾರತದಲ್ಲಿ ಏಕರೂಪ ಕಾನೂನಿಗೆ ವಿರೋಧ ಏಕೆ? ಏಕರೂಪ ಕಾನೂನಿನ ಸಾಧಕ-ಬಾಧಕಗಳನ್ನು ತಿಳಿದುಕೊಂಡು ಜನಸಾಮಾನ್ಯರಿಗೆ ಏಕರೂಪ ನಾಗರಿಕ ಸಂಹಿತೆಯ ಅವಶ್ಯಕತೆಯನ್ನು ತಿಳಿಸುವ ಕಾರ್ಯವನ್ನು ಸಂಘದ ಕಾರ್ಯಕರ್ತರು ಮಾಡಬೇಕು ಎಂದರು. 

ಸಮಾರಂಭದಲ್ಲಿ ಸಂಘದ ಪೃಥ್ವಿರಾಜ ಜೈನ್, ಬದರಿನಾಥ, ಪಂಪಣ್ಣನಾಯ್ಕ, ಸತ್ಯನಾರಾಯಣ ವಿಶ್ವರೂಪ, ಶ್ರೀನಿವಾಸ ಏಕಬೋಟೆ, ವಿಜಯಕುಮಾರ ಜೋಶಿ, ಕೊಟ್ರೇಶ್ ಎಮ್ಮಿ, ಕೃಷ್ಣ ಬತ್ತಲ, ಮಹೇಶ ನಾಡಿಗೇರ, ಸಂದೀಪ ರೂಪನಗುಡಿ, ಚಿದಂಬರ ಜೋಶಿ, ಸೀತಾರಾಮ ಕಣೇಕಲ್ಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯದರ್ಶಿ ಕೆ.ಎನ್. ಷಣ್ಮುಖ ಸ್ವಾಗತಿಸಿ, ವಂದಿಸಿದರು.

error: Content is protected !!