ಮಲೇಬೆನ್ನೂರು, ಆ. 17 – ಕುಣೆಬೆಳಕೆರೆ ಗ್ರಾ.ಪಂ. ಅಧ್ಯಕ್ಷರಾಗಿ ಎಂ.ಬಿ. ನಾಗರಾಜ್ ಮತ್ತು ಉಪಾಧ್ಯಕ್ಷರಾಗಿ ಭಾಸ್ಕರರಾವ್ ಕ್ಯಾಂಪಿನ ಶ್ರೀಮತಿ ಪದ್ಮಾವತಿ ಸಾಯಿ ಪ್ರಸಾದ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿ ಕಾರಿಯಾಗಿ ಬಿಇಓ ಹನುಮಂತಪ್ಪ ಕಾರ್ಯನಿರ್ವಹಿಸಿದರು.
ಗ್ರಾ.ಪಂ. ಸದಸ್ಯರಾದ ಕೆ.ಬಸವರಾಜಪ್ಪ, ಉಮೇಶ್ ಹನುಮಂತಪ್ಪ, ಚಂದ್ರಮ್ಮ, ಲತಾ, ಚಷೀರಾಬಾನು, ಹಾಲಮ್ಮ, ರತ್ನಮ್ಮ, ಬನ್ನಿಕೋಡು ಮಹಾದೇವಪ್ಪ, ಹಾಜರಿದ್ದು, ಅವಿರೋಧ ಆಯ್ಕೆಗೆ ಸಹಕರಿಸಿದರು. ಪಿಡಿಓ ತಿಪ್ಪೇಸ್ವಾಮಿ ಹಾಜರಿದ್ದರು. ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಜಿ.ರುದ್ರಪ್ಪ, ಕೆ.ಹನುಮಂತಪ್ಪ, ಕೆ.ಸಿದ್ದಪ್ಪ, ಕೋಲ್ಕಾರ್ ನಾಗಪ್ಪ ಮತ್ತಿತತರು ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದರು.