ವಿಘ್ನೇಶ್ವರ ಸ್ಪಾರ್ಕಲ್ಸ್ ಕೇಂದ್ರದಲ್ಲಿ ಬೆಂಕಿ ಅವಘಡ

ವಿಘ್ನೇಶ್ವರ ಸ್ಪಾರ್ಕಲ್ಸ್ ಕೇಂದ್ರದಲ್ಲಿ ಬೆಂಕಿ ಅವಘಡ

ರಾಣೇಬೆನ್ನೂರು, ಆ. 17- ಕಳೆದ 15 ದಿನಗಳ ಹಿಂದೆ ಇಲ್ಲಿನ ಎರೇಕುಪ್ಪಿ ರಸ್ತೆಯ ಮಾರುತಿ ನಗರದ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದಲ್ಲಿ (ಸ್ಪಾರ್ಕ್ ಕ್ಯಾಂಡಲ್) ನಡೆದ ಘಟನೆ ಮಾಸುವ ಮುನ್ನವೇ ಗುರುವಾರ ಬೆಳಗಿನ ಜಾವ ಮತ್ತೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. 

ನಗರದ ಶಿವಪ್ಪ ನೀಲಮ್ಮನವರಿಗೆ ಸೇರಿದ ಕಟ್ಟಡದಲ್ಲಿ ಬಾಡಿಗೆ ಪಡೆದು ಬ್ಯಾಡಗಿ ತಾಲ್ಲೂಕಿನ ಶ್ರೀಕಾಂತ ತಿಮ್ಮಾಪುರ ಎಂಬು ವರು ಅನಧಿಕೃತವಾಗಿ ಸ್ಪಾರ್ಕ್ ಕ್ಯಾಂಡಲ್ ತಯಾರಿಕಾ ಘಟಕ ನಡೆಸುತ್ತಿದ್ದರು. 

ಆ.1ರಂದು ಘಟಕದಲ್ಲಿ ಸ್ಫೋಟ ಸಂಭವಿಸಿ ಶ್ರೀಕಾಂತ ಸೇರಿದಂತೆ 7 ಜನರು ಗಾಯಗೊಂಡಿದ್ದು, ಆ ಪೈಕಿ ಒಬ್ಬ ವ್ಯಕ್ತಿ ಆ.2 ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಆ ಸಮಯದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇಂದಿನ ಘಟನೆಗೆ ಕಾರಣ: ಆ.1ರಂದು ಸ್ಫೋಟ ಸಂಭವಿಸಿದ ನಂತರ ಎರಡು ಬ್ಯಾರೆಲ್‍ಗಳಲ್ಲಿ ಸಂಗ್ರಹಿಸಿಡಲಾಗಿದ್ದ ಸ್ಫೋಟಕ ವಸ್ತುವನ್ನು (ಮದ್ದಿನ ಪೌಡರ್‌) ನಗರಸಭೆಯವರಾಗಲೀ ಅಥವಾ ಪೊಲೀಸ್ ಇಲಾಖೆಯವರಾಗಲೀ ನಿಷ್ಕ್ರಿಯಗೊಳಿಸ ದಿರುವುದೇ ಇಂದಿನ ಘಟನೆಗೆ ಪ್ರಮುಖ ಕಾರಣವಾಗಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.  ಈ ಘಟನೆ ಕುರಿತಂತೆ ನಗರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಉಂಟಾಗುತ್ತಿದೆ.

error: Content is protected !!