ಮಲೇಬೆನ್ನೂರು, ಆ.17- ಕುಂಬಳೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಸಮಾನ ಮನಸ್ಕರ ಗುಂಪಿಗೆ ಜಯ ಸಿಕ್ಕಿದೆ.
ಗುರುವಾರ ಸಂಘದ 8 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಮಾನ ಮನಸ್ಕರ ಗುಂಪಿನ ಡಿ. ಕರಿಬಸಪ್ಪ (ಬಿಸಿಎಂ `ಎ’), ಕೆ. ಗಿರೀಶ್ (ಸಾಮಾನ್ಯ), ಎಸ್. ಮಂಜಪ್ಪ (ಬಿಸಿಎಂ `ಬಿ’), ಎನ್. ಲೋಕೇಶ್ (ಸಾಮಾನ್ಯ), ಕಡೂರು ಆಂಜನೇಯ (ಎಸ್ಸಿ) ಮತ್ತು ಇನ್ನೊಂದು ಗುಂಪಿನಿಂದ ಸಂಘದ ಹಾಲಿ ಅಧ್ಯಕ್ಷರಾಗಿದ್ದ ಡಿ.ಕೆ. ಸ್ವಾಮಿ, ಕೆ.ಜಿ. ಕರಿಬಸಪ್ಪ ಮತ್ತು ಧರ್ಮರಾಜ್ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಶ್ರೀಮತಿ ಸಿದ್ದಮ್ಮ ನಾಗೋಳ್, ಶ್ರೀಮತಿ ನೇತ್ರಾವತಿ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ಶ್ರೀಮತಿ ನೀಲಮ್ಮ ರಾಘವೇಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಸ್ಟಿ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ನಡೆದಿಲ್ಲ.