ಮಹಿಳೆಯರಿಗೂ ಸ್ವಾತಂತ್ರ್ಯ ಸಿಕ್ಕಂತಾಗಿದೆ

ಮಹಿಳೆಯರಿಗೂ ಸ್ವಾತಂತ್ರ್ಯ ಸಿಕ್ಕಂತಾಗಿದೆ

ಹರಪನಹಳ್ಳಿಯಲ್ಲಿನ ಸ್ವಾತಂತ್ರ್ಯೋತ್ಸವದಲ್ಲಿ ಶಾಸಕರಾದ ಎಂ.ಪಿ. ಲತಾ

ಹರಪನಹಳ್ಳಿ, ಆ.15- ಹರಪನಹಳ್ಳಿಯ ಜನರು ಈ ಬಾರಿ ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ ಹಿನ್ನೆಲೆಯಲ್ಲಿ ಮಹಿಳೆಯರಿಗೂ ಸ್ವಾತಂತ್ರ್ಯ ಸಿಕ್ಕಂತಾಗಿದೆ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯೋತ್ಸವ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಅವರವರ ಕ್ಷೇತ್ರಗಳಲ್ಲಿ  ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕೆಲಸ ಮಾಡಿ ದೇಶಕ್ಕೆ ಕೊಡುಗೆ ನೀಡಬೇಕು. ಯಾವುದೇ ಕೆಲಸ ಮಾಡಿದರೂ ಪ್ರಾಮಾ ಣಿಕತೆ ನಿಷ್ಟೆಯಿಂದ ಕೆಲಸ ಮಾಡಬೇಕು. ಯುವಕರಿಗೆ ದೇಶ ಪ್ರೇಮ, ದೇಶಭಕ್ತಿ ಇರಬೇಕು. ಹೋರಾಟಗಾರರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು, ಅವರ ವ್ಯಕ್ತಿತ್ವವನ್ನು ನಾವು ಇಂದು ಸ್ಮರಿಸಬೇಕಿದೆ. ಅಂದು ಜಾತಿ, ಲಿಂಗ ಭೇದ ತಾರತಮ್ಯವಿಲ್ಲದೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಕ್ಕೆ ಮುಂದಾಗಿದ್ದರು. ಮಹಿಳೆಯರೂ ಸಹ ಆ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಅವರು ಸ್ಮರಿಸಿದರು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ಪ್ರತಿಯೊಬ್ಬರೂ ನಿತ್ಯ ನೆನಪಿಸಿಕೊಳ್ಳಬೇಕು. ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿದೆ. ಜಾಗತಿಕ ಮಟ್ಟದಲ್ಲಿ ದೇಶ 5ನೇ ಸ್ಥಾನದಲ್ಲಿದೆ ಎಂದ ಅವರು ಶತೃ ರಾಷ್ಟ್ರಗಳನ್ನು ಹಿಮ್ಮೆಟಿಸಲು ಭಾರತ ಬಲಿಷ್ಠವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ದೇಶದೊಟ್ಟಿಗೆ ನಿಲ್ಲಬೇಕು ಎಂದರು.

ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್ ಮಾತನಾಡಿ, ವಿಶ್ವದಲ್ಲಿಯೇ ಶಾಂತಿಯ ಮೂಲಕ ಸ್ವಾತಂತ್ರ್ಯ ಪಡೆದ ದೇಶ ನಮ್ಮದು. ಪ್ರತಿಯೊಬ್ಬರೂ ಮೂಲಭೂತ ಹಕ್ಕುಗಳನ್ನು ಹೇಗೆ ಪಡೆಯುತ್ತೇವೆಯೋ ಅದೇ ರೀತಿ ಕರ್ತವ್ಯಗಳನ್ನೂ ಸಹ ಪಾಲನೆ ಮಾಡಬೇಕು ಎಂದು ಹೇಳಿದರು.

ಶಿಕ್ಷಣ, ಕಲಾ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಿ, ಗೌರವಿಸಲಾಯಿತು.ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್ ಬಾಬು, ಡಿವೈಎಸ್‍ಪಿ ಮಾಲತೇಶ್ ಎನ್. ಕೂನಬೇವು, ಇಓ ಕೆ.ಆರ್.ಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಯು.ಬಸವರಾಜಪ್ಪ, ವಲಯ ಅರಣ್ಯ ಅಧಿಕಾರಿ ಕೆ.ಮಲ್ಲಪ್ಪ, ಪುರಸಭೆ ಸದಸ್ಯರಾದ ನಿಟ್ಟೂರು ಭೀಮವ್ವ ಸಣ್ಣಹಾಲಪ್ಪ, ಎಂ.ವಿ.ಅಂಜಿನಪ್ಪ, ಟಿ.ವೆಂಕಟೇಶ್, ಜಾವೀದ್, ಗಣೇಶ್, ಜಾಕೀರ್, ಮಂಜುನಾಥ್, ರಾಜು ಗೊಂಗಡಿ, ರೆಹಮಾನ್, ಲಾಟಿ ದಾದಾಪೀರ್, ಸಿ. ಹನುಮಕ್ಕ,  ಲಕ್ಕಳ್ಳಿ ಹನುಮಂತಪ್ಪ, ಗೌತಮ್ ಪ್ರಭು, ವೈಕೆಬಿ ದುರುಗಪ್ಪ, ಗಿರಜ್ಜಿ ಮಂಜುನಾಥ್,  ಸಿಪಿಐ ನಾಗರಾಜ್. ಎಂ.ಕಮ್ಮಾರ್, ಪಿಎಸ್‍ಐ ಶಂಭುಲಿಂಗ ಸಿ.ಹಿರೇಮಠ್, ಚಿಕ್ಕೇರಿ ಬಸಪ್ಪ, ಎಸ್.ಆರ್.ತಿಮ್ಮಣ್ಣ ಸೇರಿದಂತೆ ಇತರರು ಇದ್ದರು.

error: Content is protected !!