ಹೂವಿನಹಡಗಲಿ, ಆ.13- ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಪ್ರಪ್ರಥಮ ಬಾರಿಗೆ ಹಡಗಲಿ ತಾಲ್ಲೂಕಿಗೆ ಭೇಟಿ ನೀಡಿದ್ದರು. ಪಟ್ಟಣದ ಹೊರವಲಯದಲ್ಲಿ ಸಚಿವರನ್ನು ಸ್ವಾಗತಿಸಿದ ಶಾಸಕ ಕೃಷ್ಣನಾಯ್ಕ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ಅಂಬೇಡ್ಕರ್ ಸರ್ಕಲ್ ತಲುಪಿದಾಗ ಪೂರ್ಣ ಕುಂಭ ಹೊತ್ತ ಮಹಿಳೆಯರೊಂದಿಗೆ ಎತ್ತಿನ ಬಂಡಿಯಲ್ಲಿ ಶಾಸಕ ಕೃಷ್ಣನಾಯ್ಕ, ಜಿಲ್ಲಾಧಿ ಕಾರಿ ಎಂ. ಎಸ್. ದಿವಾಕರ್ ಜೊತೆಯಾಗಿ ಮೆರವಣಿಗೆಯಲ್ಲಿ ಸಾಗಿದರು.
ಶಾಸ್ತ್ರಿ ಸರ್ಕಲ್ನಲ್ಲಿ ಅಭಿಮಾನಿಗಳು ಜೆಸಿಬಿ ಮೂಲಕ ಸೇಬಿನ ಹಣ್ಣಿನ ಹಾರವನ್ನು ಹಾಕಿ ಹೂ ಮಳೆ ಸುರಿಸಿದರು. ಸಚಿವರು ಪ್ರವಾಸಿ ಮಂದಿರಕ್ಕೆ ತೆರಳಿದ ನಂತರ ಜಾಮಿಯಾ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.