ಹೊನ್ನಾಳಿ, ಆ.13- ಪಟ್ಟಣದ ಹೃದಯ ಭಾಗದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವೀರಭದ್ರೇಶ್ವರ ದೇವಸ್ಥಾನದ ಕಟ್ಟಡವನ್ನು ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ದೇವಸ್ಥಾನ ಸಮಿತಿಯವರು ಸುಂದರವಾದ ಶಿಲೆಯ ಕಲ್ಲಿನಿಂದ ಪೇಟೆವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನವು ಅತ್ಯಂತ ಶೀಘ್ರವಾಗಿ ನಡೆಯುತ್ತಿದ್ದು, ದೇವಸ್ಥಾನ ಕಟ್ಟುವ ಕಾರ್ಯವು ಪೂರ್ಣಗೊಳ್ಳುತ್ತಿದ್ದು, ಇಲ್ಲಿನ ಭಕ್ತರ ಸಹಕಾರದಿಂದ ದೇವರ ದರ್ಶನ ಭಾಗ್ಯ ದೊರೆಯ ಲೆಂದರು. ಇಲ್ಲಿನ ಆಸ್ತಿಕ ಸದ್ಭಕ್ತರಿಗೆ ಸಂತೋಷ, ಶಾಂತ, ನೆಮ್ಮದಿಗೆ ಕಾರಣವಾಗಲಿದೆ. ಶಿಲಾ ಕಟ್ಟಡವು ಸುಂದರವಾಗಿ ನಿರ್ಮಾಣವಾಗು ತ್ತಿದ್ದು ಬರುವ ಕಾರ್ತೀಕ ಮಾಸದಲ್ಲಿ ಉದ್ಘಾ ಟನೆಗೆ ಸಿದ್ದವಾಗಲಿದೆ ಎಂದರು.
ಪಟ್ಟಣಶೆಟ್ಟಿ ಪರಮೇಶ್ ಮಾತನಾಡಿ, ತುಮಕೂರು-ಶಿರಾ ಕಡೆಯ ಕಲ್ಲನ್ನು ತೆರವು ಗೊಳಿಸಲಾ ಗಿದ್ದು, ಕಾರ್ಕಳ ಶಿಲ್ಪಿಯವರಿಂದ ಸುಂದರವಾಗಿ ನಿರ್ಮಾಣವಾಗು ತ್ತಿದ್ದು, ಸುಮಾರು 1 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಟ್ಟಡವು ನಿರ್ಮಾಣವಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ದೇವಸ್ತಾನ ಸಮಿತಿಯ ಪದಾಧಿ ಕಾರಿಗಳು, ಸಮಾಜದ ಮುಖಂಡರಾದ ಕುಂಬಾರ ಮುರು ಗೇಂದ್ರಣ್ಣ, ಸತೀಶ್, ರುದ್ರಣ್ಣ, ಪಟ್ಟಣಶೆಟ್ಟಿ ವಿಜಯ್, ಕುಂಬಾರ ಬಸಣ್ಣ, ಹೆಚ್.ಆರ್. ಸತೀಶ್ ಇನ್ನಿತರರಿದ್ದರು.