ಹರಿಹರ, ಆ. 13 – ತಾಲ್ಲೂಕಿನ ರಾಜನಹಳ್ಳಿ, ಹಲಸಬಾಳು, ಬಿಳಸನೂರು ಸೇರಿದಂತೆ ವಿವಿಧ ಅಂಗನವಾಡಿ ಕೇಂದ್ರಗಳಿಗೆ ಉಪವಿಭಾಗಾಧಿ ಕಾರಿ ಶ್ರೀಮತಿ ಎನ್. ದುರ್ಗಾಶ್ರೀ ಅವರು ಭೇಟಿ ಕೊಟ್ಟು ಬಿ.ಎಲ್.ಓ.ಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು. ಈ ವೇಳೆ ಮತದಾರರ ಪಟ್ಟಿಯ ಪರಿಷ್ಕರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಅಂಗನವಾಡಿ ಶಿಕ್ಷಕಿ ಸುವಿತ್ರ ರಾಜನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.
January 12, 2025