ದಾವಣಗೆರೆ, ಆ. 13 – ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯ ಪ್ರಯುಕ್ತ ನೂರಾರು ವರ್ಷಗಳ ಹಳೆಯ ಕ್ಯಾಮರಾಗಳ ಪ್ರದರ್ಶನವನ್ನು ಇದೇ ದಿನಾಂಕ 18 ಮತ್ತು 19ರಂದು ನಗರದ ಗುರುಭವನದಲ್ಲಿ ಏರ್ಪಡಿಸಲಾಗಿದೆ. ಅದಕ್ಕೆ ಪೂರಕವಾಗಿ ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಮಹಾಸ್ವಾಮಿಜಿ ಇಂದು ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದಾವಣಗೆರೆ ತಾಲ್ಲೂಕು ಫೋಟೋಗ್ರಾಫರ್ ಯೂತ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್ ಅಗಡಿ, ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಾಗೂ ತಾಲ್ಲೂಕು ಉಪಾಧ್ಯಕ್ಷ ತಿಪ್ಪೇಸ್ವಾಮಿ ಎಸ್.ಆರ್.ಎಚ್.ಕೆ.ಸಿ. ರಾಜು, ಖಜಾಂಚಿ ಮಲ್ಲಿಕಾರ್ಜುನ್, ಕೆ.ಪಿ. ನಾಗರಾಜ್ ಸಹ ಕಾರ್ಯದರ್ಶಿ ಅರುಣ ಬಿ.ಪಿ., ತಿಲಕ್ ಅರುಣ್ ಬಾಸಿಂಗ, ಕಿರಣ್ ಕುಮಾರ್, ಪಂಚಾಕ್ಷರಯ್ಯ, ರುದ್ರಮ್ಮ, ಮಂಗಳಮ್ಮ, ಪ್ರಕಾಶ ಹಾಗೂ ಮಾಜಿ ಜಿಲ್ಲಾಧ್ಯಕ್ಷ ಶಂಭು, ನಿರ್ದೇಶಕ ಮಂದಾರ ಬಸವರಾಜ್, ಮಿಥುನ್, ಕಿಶೋರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
January 11, 2025