ಕ್ರಾಂತಿಕಾರಿ ಕವಿ ಗದ್ದರ್ ನಿಧನಕ್ಕೆ ಜಿಲ್ಲಾ ಇಪ್ಟಾ ಸಂತಾಪ

ಕ್ರಾಂತಿಕಾರಿ ಕವಿ ಗದ್ದರ್ ನಿಧನಕ್ಕೆ ಜಿಲ್ಲಾ ಇಪ್ಟಾ ಸಂತಾಪ

ದಾವಣಗೆರೆ,  ಆ. 11- ಕ್ರಾಂತಿಕಾರಿ ಕವಿ ಗದ್ದರ್ ಅವರ ನಿಧನಕ್ಕೆ ಭಾರತೀಯ ಜನಕಲಾ ಸಮಿತಿ ದಾವಣಗೆರೆ ಜಿಲ್ಲಾ ಸಮಿತಿ ವತಿಯಿಂದ ಇಂದು ಸಂತಾಪ ಸೂಚಿಸಲಾಯಿತು.

ಇಲ್ಲಿನ ಕಾಂ. ಪಂಪಾಪತಿ ಭವನದಲ್ಲಿ ಮೊನ್ನೆ ಸೇರಿದ್ದ ಭಾರತೀಯ ಜನಕಲಾ ಸಮಿತಿಯ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕ್ರಾಂತಿಕಾರಿ ಕವಿ ಗದ್ದರ್ ರವರಿಗೆ ಸಂತಾಪ ಸೂಚಕ ಸಭೆ ನಡೆಸಿ, ಸಮಾಜವನ್ನು ಸರಿದಾರಿಗೆ ತರಲು, ಯುವ ಜನರಲ್ಲಿ ಜಾಗೃತಿ ಮೂಡಿಸಲು ತಮ್ಮ ಜೀವಮಾನವನ್ನೇ ಮುಡುಪಾಗಿಟ್ಟು ಹಗಲು-ರಾತ್ರಿ ಹಲವಾರು ರಾಜ್ಯಗಳಲ್ಲಿ ತಿರುಗಾಟ ನಡೆಸಿ ತಮ್ಮ ಹಾಡುಗಳ ಮೂಲಕ ದೇಶದ ದುರಾ ಡಳಿತ ವ್ಯವಸ್ಥೆಯ ವಿರುದ್ಧ ಜನರನ್ನು ಜಾಗೃತಿಗೊ ಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಇಪ್ಟಾ ಜಿಲ್ಲಾಧ್ಯಕ್ಷ ಕಾಮ್ರೆಡ್ ಐರಣಿ ಚಂದ್ರು ಹೇಳಿದರು.

ಗದ್ದರ್ ರವರು ದಾವಣಗೆರೆಗೆ ಬಂದಾಗ ಇಪ್ಟಾ ಜಿಲ್ಲಾ ಸಮಿತಿಯಿಂದ ಅವರನ್ನು ಸನ್ಮಾನಿಸಿದ ನೆನಪನ್ನು ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಕೆ. ಬಾನಪ್ಪ ಸಭೆಯಲ್ಲಿ ಸ್ಮರಿಸಿದರು.  ಸಂತಾಪ ಸಭೆ ಉದ್ದೇಶಿಸಿ ಇಪ್ಟಾ ಸಲಹೆಗಾರರಾದ ಆವರಗೆರೆ ಚಂದ್ರು, ಹೆಚ್.ಜಿ. ಉಮೇಶ್, ಪುರಂದರ ಲೋಕೀಕೆರೆ, ಹೆಗ್ಗೆರೆ ರಂಗಪ್ಪ ಮಾತನಾಡಿದರು.

ಓಬಣ್ಣ, ಕುಕ್ಕವಾಡ ಮಾಂತೇಶ್, ಶ್ಯಾಗಲೆ ಶರಣಪ್ಪ, ಲೋಕಿಕೆರೆ ರುದ್ರೇಶ್, ಖಾದರ್ ಭಾಷಾ, ರೇವಣ್ಣ ನಾಯಕ, ಮಲ್ಲಿಕಾರ್ಜುನ ಸ್ವಾಮಿ, ಹೂವಣ್ಣ, ಕಗತೂರು ಮಲ್ಲೇಶಪ್ಪ, ಶಾಂಭವಿ ಹರಿಹರ, ರಂಗಮ್ಮ ಹೆಚ್, ನರೇಗಾ ರಂಗನಾಥ್, ಹೆಚ್.ಎಸ್. ಚಂದ್ರು, ತುರ್ಚಘಟ್ಟ ಶ್ರೀನಿವಾಸ್, ಎ. ತಿಪ್ಪೇಶ್ ಮತ್ತಿತರರು ಸಂತಾಪ ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!